Kodagu

ಹೊಸತೋಟದಲ್ಲಿ ಎಡಿಕೇರಿ‌ ಪ್ರಸನ್ನ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ

admincoorgdaily

ಹೊಸತೋಟದಲ್ಲಿ ಎಡಿಕೇರಿ‌ ಪ್ರಸನ್ನ ಅಭಿಮಾನಿ ಬಳಗದಿಂದ ರಕ್ತದಾನ ಶಿಬಿರ
1002611499.jpg


ಹೊಸತೋಟ: ಹೊಸತೋಟ ಗ್ರಾಮದಲ್ಲಿ ಎಡಿಕೇರಿ ಪ್ರಸನ್ನ ಅಭಿಮಾನಿ ಬಳಗದ ವತಿಯಿಂದ ಭಾನುವಾರ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಶಿಬಿರದಲ್ಲಿ ಮಡಿಕೇರಿ ವೈದ್ಯಕೀಯ ಕಾಲೇಜಿನ ರಕ್ತನಿಧಿ ವಿಭಾಗದ ಡಾ. ಕರುಂಬಯ್ಯ ಅವರು ರಕ್ತದಾನಿಗಳಿಗೆ ಹಾಗೂ ನೆರೆದಿದ್ದ ಗ್ರಾಮಸ್ಥರಿಗೆ ರಕ್ತದಾನದ ಉಪಯೋಗ, ಮಹತ್ವ ಮತ್ತು ರಕ್ತದಾನದಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದಾದ ಬಗ್ಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ  ಎಡಿಕೇರಿ ಪ್ರಸನ್ನ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾದರು. ಬಳಿಕ ಮಾತನಾಡಿದ ಅವರು, ರಕ್ತದಾನದ ಮಹತ್ವವನ್ನು ವಿವರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.

ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಹೊಸತೋಟದ ರಾಜೇಶ್ ಹಾಗೂ ಹರೀಶ್ ಅವರನ್ನು ಅಭಿನಂದಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ನೇಹಿತರಿಗೆ ಹಾಗೂ ಗ್ರಾಮದ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ರಕ್ತದಾನವು ಕೇವಲ ದಾನವಲ್ಲ, ಅದು ಮತ್ತೊಂದು ಜೀವಕ್ಕೆ ನೀಡುವ ಬದುಕಿನ ಉಡುಗೊರೆ ಎಂಬ ಸಂದೇಶವನ್ನು ಈ ಶಿಬಿರ ಸಾರಿತು. ಈ ಮಹತ್ಕಾರ್ಯಕ್ಕೆ ಸಹಕರಿಸಿದ ಮಡಿಕೇರಿ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ರಕ್ತನಿಧಿ ವಿಭಾಗದ ತಂಡಕ್ಕೆ ಆಯೋಜಕರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.