Kodagu

ಹಾರಂಗಿ ಬ್ಯಾಕ್ ವಾಟರ್‌ನಲ್ಲಿ ಬೋಟ್ ಪಲ್ಟಿ: ಗುಜರಾತ್ ಮೂಲದ ದಂಪತಿ ದುರ್ಮರಣ, ಇಬ್ಬರು ಮಕ್ಕಳು ಪಾರು

admincoorgdaily

ಹಾರಂಗಿ ಬ್ಯಾಕ್ ವಾಟರ್‌ನಲ್ಲಿ ಬೋಟ್ ಪಲ್ಟಿ: ಗುಜರಾತ್ ಮೂಲದ ದಂಪತಿ ದುರ್ಮರಣ, ಇಬ್ಬರು ಮಕ್ಕಳು ಪಾರು
ಕುಶಾಲನಗರ;ಹಾರಂಗಿ ಅಣೆಕಟ್ಟೆ ಸಮೀಪದ ಅನೇಕ್ಯಾಂಪ್ ಬಳಿ ಖಾಸಗಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್‌ನ ಬೋಟ್ ಪಲ್ಟಿಯಾಗಿ ಗುಜರಾತ್ ಮೂಲದ ದಂಪತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಇಬ್ಬರು ಮಕ್ಕಳೊಂದಿಗೆ ಬೋಟಿಂಗ್‌ಗೆ ತೆರಳಿದ್ದ ದಂಪತಿ, ಬೋಟ್ ತಿರುವು ಪಡೆಯುವ ಸಂದರ್ಭದಲ್ಲಿ ಪಲ್ಟಿಯಾದ ಪರಿಣಾಮ ಬೋಟ್ ಅಡಿಯಲ್ಲಿ ಸಿಲುಕಿ ದುರ್ಮರಣ ಹೊಂದಿದ್ದಾರೆ ಎನ್ನಲಾಗಿದೆ. ದುರಂತದಲ್ಲಿ ಇಬ್ಬರು ಮಕ್ಕಳು ಪಾರಾಗಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.