ಮಡಿಕೇರಿಯಲ್ಲಿ ರ‍್ಯಾಪಿಡೋಗೆ ಬ್ರೇಕ್ ಹಾಕಿ: ಆಟೋ, ಟ್ಯಾಕ್ಸಿ ಚಾಲಕರ ಆಕ್ರೋಶ
admincoorgdaily

ಮಡಿಕೇರಿ: ಆಟೋ ಮಾಲೀಕ ಚಾಲಕರ ಸಂಘ ಮತ್ತು ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ನಗರದಲ್ಲಿ ರ‌್ಯಾಪಿಡೋ ಸೇವೆ ಆರಂಭಿಸಿರುವುದನ್ನು ಖಂಡಿಸಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದಎ.ವಿ ಶಾಲೆಯಿಂದ ಹೊರಟ ಮೆರವಣಿಗೆ ನಗರದ ಪ್ರಮುಖ ವೃತ್ತಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ರ‌್ಯಾಪಿಡೋ ಸ್ಥಗಿತಗೊಳಿಸಬೇಕು, ನಿಯಮ ಮೀರಿದ ರೆಂಟಲ್ ಬೈಕ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಆಟೋ ಮಾಲೀಕ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ ಮಾತನಾಡಿ, ಕೊಡಗಿನಲ್ಲಿ ೧೨ ಸಾವಿರ ಆಟೋ, ೨ ಸಾವಿರ ಟ್ಯಾಕ್ಸಿ ಇದ್ದು, ರೆಂಟಲ್ ಬೈಕ್ ಮತ್ತು ರ‌್ಯಾಪಿಡೋದಿಂದ ಜೀವನಕ್ಕೆ ತೊಂದರೆಯಾಗಿದೆ. ಅಲದೇ, ೨೫ ಬೈಕ್‌ಗೆ ಅನುಮತಿ ಪಡೆದು ನೂರಾರು ಬೈಕ್ ಓಡಿಸುತ್ತಿದ್ದಾರೆ ಎಂದು ದೂರಿದರು.
ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಗೌರವಾಧ್ಯಕ್ಷ ಸಂತೋಷ್ ಕಾರ್ಯಪ್ಪ ಅವರು ಗುಡ್ಡಗಾಡಿಗೆ ರ‌್ಯಾಪಿಡೋ ಬೇಡ ಎಂದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಜಯಲಕ್ಷ್ಮಿ ರಾಯಕೋಡ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಮಡಿಕೇರಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ವೀರೇಂದ್ರ ಗೌಡ, ಪ್ರಮುಖರಾದ ಮದುಮಂದಣ್ಣ, ಗಣೇಶ್, ಆಟೋ ಮಾಲೀಕ ಚಾಲಕರ ಸಂಘ ಪ್ರಮುಖರಾದ ಸಮ್ಮದ್, ದಿನೇಶ್ ಶೆಟ್ಟಿ ಹಾಗೂ ಟ್ಯಾಕ್ಸಿ, ಆಟೋ ಚಾಲಕರು ಇದ್ದರು.