Kodagu

SIR ವಿರೋಧಿಸಿ ಆಯುಕ್ತರ ಪ್ರತಿಕೃತಿ ದಹನ: ಕಾಂಗ್ರೆಸ್ ವಿರುದ್ಧ ಸುಮೊಟೊ ಕೇಸ್‌ಗೆ ಬಿಜೆಪಿ ಆಗ್ರಹ

admincoorgdaily

SIR ವಿರೋಧಿಸಿ ಆಯುಕ್ತರ ಪ್ರತಿಕೃತಿ ದಹನ: ಕಾಂಗ್ರೆಸ್ ವಿರುದ್ಧ ಸುಮೊಟೊ ಕೇಸ್‌ಗೆ ಬಿಜೆಪಿ ಆಗ್ರಹ
ಮಡಿಕೇರಿ: ಎಸ್‌ಐಆರ್ ಪರಿಷ್ಕರಣೆ ವಿರುದ್ಧ ಚುನಾವಣಾ ಆಯುಕ್ತರ ಪ್ರತಿಕೃತಿ ದಹಿಸಿದ ಕಾಂಗ್ರೆಸ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ಶಾಂತೆಯಂಡ ರವಿ ಕುಶಾಲಪ್ಪ, ವಿರಾಜಪೇಟೆಯಲ್ಲಿ ಶಾಸಕರ ಪ್ರತಿಕೃತಿ ಸುಟ್ಟಿದ್ದಕ್ಕೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕೃತಿ ಸುಟ್ಟ ಕಾಂಗ್ರೆಸ್ ವಿರುದ್ಧ ಕ್ರಮವಿಲ್ಲ. ಇದು ದ್ವಂದ್ವ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ವಕ್ತಾರ ತಳೂರು ಕಿಶೋರ್ ಮಾತನಾಡಿ, ಅಕ್ರಮ ವಲಸಿಗರ ಮತದಿಂದ ಕಾಂಗ್ರೆಸ್ ಗೆಲ್ಲುತ್ತಿತ್ತು. ಎಸ್‌ಐಆರ್‌ನಿಂದ ಹತಾಶೆಯಾಗಿದೆ. ನಟ ಪ್ರಕಾಶ್ ರಾಜ್ ಕೊಡಗಿಗೆ ಬಂದು ವಿಷಬೀಜ ಬಿತ್ತುತ್ತಿದ್ದಾರೆ ಎಂದು ಟೀಕಿಸಿದರು. 
ಗೋಷ್ಠಿಯಲ್ಲಿ ಅರುಣ್ ಕುಮಾರ್, ಸಜಿಲ್ ಕೃಷ್ಣ ಇದ್ದರು.