ದೇವರಕೊಲ್ಲಿ ಬಳಿ ಕಾರು ಅಪಘಾತ, ಪ್ರವಾಸಿಗ ಸಾವು
admincoorgdaily

ಮಡಿಕೇರಿ; ಸಮೀಪದ ದೇವರಕೊಲ್ಲಿ ಬಳಿ ಮಂಗಳೂರಿಗೆ ಪ್ರವಾಸಕ್ಕೆ ತೆರಳುತ್ತಿದ್ದ ಬೆಂಗಳೂರು ಮೂಲದ ನಾಗದೇವನಹಳ್ಳಿ ನಿವಾಸಿ ಪ್ರಸನ್ನ ಅವರ ಪುತ್ರ ಎನ್.ಪಿ. ದೀಕ್ಷಿತ್ ( 22 ) ಸೋಮವಾರ ಸಂಜೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಇನ್ನಿಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದಲ್ಲಿದ್ದ ಬಂಡೆಕಲ್ಲುಗಳಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಸುಳ್ಯದ ಕೆ. ವಿ. ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.