ಮಹಿಳಾ ಅಧಿಕಾರಿ ನಾಯಿ ಎಂದವನ ಮೇಲೆ ಪ್ರಕರಣ ದಾಖಲು
admincoorgdaily

ಸೋಮವಾರಪೇಟೆ: ಮಹಿಳಾ ಅಧಿಕಾರಿಯನ್ನು
ಸಾರ್ವಜನಿಕವಾಗಿ ನಾಯಿ ಎಂದು ನಿಂದಿಸಿದ ವ್ಯಕ್ತಿಯ ಮೇಲೆ ಸೋಮವಾರಪೇಟೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
ಸೋಮವಾರಪೇಟೆಯಲ್ಲಿ ಇತ್ತೀಚಿಗೆ ನಡೆದ ರೈತರ ಪ್ರತಿಭಟನೆ ವೇಳೆ ಶನಿವಾರಸಂತೆ ಹಂಡ್ಲಿ ಗ್ರಾಮ ಪಂಚಾಯಿತಿ ವಿಲೇಜ್ ಅಕೌಂಟೆಂಟ್ ಶ್ವೇತಶ್ರೀ ಎಂಬ ಮಹಿಳಾ ಅಧಿಕಾರಿಯನ್ನು ಹಲವು ಬಾರಿ ನಾಯಿ ಎಂದು ಸಂಭೋದಿಸಿದ ಹಿನ್ನಲೆ ಸೋಮವಾರಪೇಟೆ ತಾಲೂಕು ರೈತ ಸಂಘದ ಅದ್ಯಕ್ಷ ದಿನೇಶ್ ಕೂತಿ ಮೇಲೆ ಪ್ರಕರಣ ಪ್ರಕರಣ ದಾಖಲಾಗಿದೆ.
ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲೇ ಹಲವು ಬಾರಿ ಶ್ವೇತಶ್ರೀ ಅವರನ್ನು ನಾಯಿ ಎಂದು ನಿಂದಿಸಲಾತ್ತು. ಇದನ್ನು ತಹಶೀಲ್ದಾರ್ ಸ್ಥಳದಲ್ಲಿಯೇ ಖಂಡಿಸಿದ್ದರು. ಅದಾದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಬಿಎನ್ಎಸ್ 354 ಅನ್ವಯ ಪ್ರಕರಣ ದಾಖಲಿಸಲಾಗಿದೆ.