ರಾಜ್ಯಮಟ್ಟದ 5'ಎ ಸೈಡ್ ಹಾಕಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ಕಾವೇರಿ ಕಾಲೇಜು
admincoorgdaily

ಪೊನ್ನಂಪೇಟೆ;
ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪೊನ್ನಂಪೇಟೆ ಪದವಿ, ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಾಗೂ ಬುಧವಾರ ಆಯೋಜಿಸಿದ್ದ 5'ಎ ಸೈಡ್ ರಾಜ್ಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜಿನ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಎಸ್.ಜೆ.ಸಿ.ಸಿ ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ನಡುವೆ ನಡೆದ ಪೈನಲ್ ಹಣಾಹಣಿಯು
ಬಹಳ ರೋಚಕತೆಯಿಂದ ಕೂಡಿತ್ತು. ಎರಡು ತಂಡಗಳು ನಿಗದಿತ ಸಮಯದಲ್ಲಿ ತಲಾ 2 ಗೋಲುಗಳನ್ನು ಬಾರಿಸಿ ಸಮ ಬಲ ಸಾಧಿಸಿದವು. ಅಂತಿಮವಾಗಿ ಗೆಲುವಿಗಾಗಿ ನಡೆದ ಸೂಟ್ ಔಟ್
ನಲ್ಲಿ ಕಾವೇರಿ ಕಾಲೇಜು ತಂಡವು ಸೋಲನ್ನೊಪ್ಪಿಕೊಂಡು ದ್ವಿತೀಯ ಸ್ಥಾನವನ್ನು ಪಡೆದ ಕೊಂಡಿತು.
ತಂಡದ ಆಟಗಾರರಾದ ಆರ್ಯನ್ ಮುತ್ತಪ್ಪ ಕ್ರೀಡಾಕೂಟದ ಉತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿ ಹಾಗೂ ಚಂದನ್ ಪಂದ್ಯಾಟದ ಉತ್ತಮ ಡಿಪೆಂಡರ್ ಪ್ರಶಸ್ತಿ ಪಡೆದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ದೈಹಿಕ ನಿರ್ದೇಶಕರಾದ ಕೆ.ಎಸ್.ತಮ್ಮಯ್ಯ ಹಾಗೂ ದ್ವಿತೀಯ ಸ್ಥಾನ ಪಡೆದ ಹಾಕಿ ತಂಡವನ್ನು ಕಾಲೇಜಿನ ಪರವಾಗಿ ಅಭಿನಂದಿಸಿದ್ದಾರೆ.