Kodagu

ಗೋಣಿಕೊಪ್ಪಲಿನಲ್ಲಿ ಕಾವೇರಿ ದಸರಾ ಸಮಿತಿ ಸಭೆ - ನೂತನ ಸಮಿತಿ ರಚನೆಗೆ ಚರ್ಚೆ

admincoorgdaily

ಗೋಣಿಕೊಪ್ಪಲಿನಲ್ಲಿ ಕಾವೇರಿ ದಸರಾ ಸಮಿತಿ ಸಭೆ - ನೂತನ ಸಮಿತಿ ರಚನೆಗೆ ಚರ್ಚೆ
1002408227.jpg


ಗೋಣಿಕೊಪ್ಪಲು: ಗೋಣಿಕೊಪ್ಪಲಿನಲ್ಲಿ ಪ್ರತಿಷ್ಠಿತ ಕಾವೇರಿ ದಸರಾ ಆಚರಣೆ ಕುರಿತು ಮಹತ್ವದ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದೆ.
ಕುಲ್ಲಚಂಡ ಪ್ರಮೋದ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ದಸರಾ ಆಚರಣೆಯ ರೂಪುರೇಷೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಇಲ್ಲಿಯವರೆಗೆ ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲೇ ದಸರಾ ನಡೆಯುತ್ತಿತ್ತು. ಆದರೆ ಈ ಬಾರಿ ಗ್ರಾ.ಪಂ ಆಡಳಿತಾವಧಿ ಮುಕ್ತಾಯಗೊಂಡಿರುವ ಕಾರಣ, ಎಲ್ಲಾ ದಶಮಂಟಪ ಸಮಿತಿಗಳ ಪ್ರಮುಖರನ್ನು ಒಳಗೊಂಡ ನೂತನ ಕಾವೇರಿ ದಸರಾ ಸಮಿತಿ ರಚಿಸಿ, ನೂತನ ಅಧ್ಯಕ್ಷರ ನೇತೃತ್ವದಲ್ಲಿ ದಸರಾ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ.

ಜೊತೆಗೆ ಕಳೆದ ಬಾರಿಯ ದಸರಾದ ಲೆಕ್ಕಪತ್ರದ ಬಗ್ಗೆಯೂ ಸಭೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಉಪಾಧ್ಯಕ್ಷ ಶಿವಾಜಿ, ದಶಮಂಟಪ ಸಮಿತಿ ಅಧ್ಯಕ್ಷ ಸಾಜಿ ಅಚುತ್ತನ್, ಮಹಿಳಾ ಅಧ್ಯಕ್ಷೆ ಮಂಜುಳ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ದಿಲನ್ ಚಂಗಪ್ಪ, ಖಜಾಂಚಿ ಧ್ಯಾನ್ ಸುಬ್ಬಯ್ಯ, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕೇಶವ್ ಕಾಮತ್, ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್ ಸೇರಿದಂತೆ ಪ್ರಮುಖರು ಇದ್ದರು.