Kodagu

ಗುಡ್ಲೂರಿನಲ್ಲಿ ಸಂಭ್ರಮದ ಕೈಲ್ ಮುಹೂರ್ತ ಆಚರಣೆ

admincoorgdaily

ಗುಡ್ಲೂರಿನಲ್ಲಿ ಸಂಭ್ರಮದ ಕೈಲ್ ಮುಹೂರ್ತ ಆಚರಣೆ
ಸಿದ್ದಾಪುರ:-
ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತವನ್ನು ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಲೂರು ಗ್ರಾಮದ ಶಾಲಾ ಆವರಣದಲ್ಲಿ ಗುರುವಾರ ಸಂಭ್ರಮದಿಂದ ಆಚರಿಸಲಾಯಿತು

ಗುಡ್ಲೂರಿನ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಮಾಜಿ ಸೈನಿಕರಾದ ಮಹೇಶ್, ನವೀನ್ ಹಾಗೂ ಮಾಜಿ ತಾಲೂಕು ಪಂಚಾಯಿತಿ ಸದಸ್ಯೆ ಕಾವೇರಮ್ಮ ಉದ್ಘಾಟಿಸಿದರು

ಶ್ರೀ ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಸೋಮಯ್ಯ ಜೆ.ಬಿ. ಮಾತನಾಡಿ ಕೃಷಿ ಕಾರ್ಯ ಮುಗಿದ ಬಳಿಕ ನೇಗಿಲು, ಕೋವಿ ಸೇರಿದಂತೆ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸಿ ಬಂಧು-ಬಳಗ ಹಾಗೂ ಸ್ನೇಹಿತರೊಂದಿಗೆ ಕೈಲ್ ಮುಹೂರ್ತವನ್ನು ಆಚರಿಸುವುದು ಕೊಡಗಿನ ವಿಶಿಷ್ಟ ಸಂಪ್ರದಾಯವಾಗಿದೆ ಗ್ರಾಮಸ್ಥರೆಲ್ಲರೂ ಕ್ರೀಡಾಕೂಟದಲ್ಲಿ ಪಾಲ್ಗೊಂಡಾಗ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚುತ್ತದೆ ಎಂದರು

ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ಓಟ, ಹಿರಿಯರ ಓಟ, ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು

ಯುವಕ ಸಂಘದ ಅಧ್ಯಕ್ಷ ಪ್ರತು, ಸದಸ್ಯರಾದ ಜಿತೇಂದ್ರ, ಯೋಗೇಶ್, ಜಗದೀಶ್, ಉಮೇಶ್ ಸೇರಿದಂತೆ ಗ್ರಾಮಸ್ಥರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.