220 ಕೆವಿ ಲೈನ್‌ಗೆ ಚಾರ್ಜ್: ಶೀಘ್ರದಲ್ಲೇ ವಿದ್ಯುತ್ ಪುನಃಸ್ಥಾಪನೆ
admincoorgdaily

ಮೈಸೂರು: ಕೊಡಗು ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ವಿದ್ಯುತ್ ಪೂರೈಸುವ 220 ಕೆವಿ ಬಸ್ತಿಪುರ-ಹುಣಸೂರು ಲೈನ್-1 ಮತ್ತು ಲೈನ್-2 ಇಂದು ಸಂಜೆ 6:43ಕ್ಕೆ ಅಂಡರ್-ಫ್ರೀಕ್ವೆನ್ಸಿ ಕಾರಣದಿಂದ ಟ್ರಿಪ್ ಆಗಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಇದೀಗ 220 ಕೆವಿ ಲೈನ್‌ಗಳಿಗೆ ಚಾರ್ಜ್ ಮಾಡಲಾಗಿದ್ದು, ಶೀಘ್ರದಲ್ಲೇ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
400/220 ಕೆವಿ ಬಸ್ತಿಪುರ ತುದಿಯಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಪವರ್ ರಿಸ್ಟೋರೇಷನ್ ಕಾರ್ಯ ಭರದಿಂದ ಸಾಗಿದೆ.