ಚೆಂಬು ಪ್ರೌಢಶಾಲೆ ಅತಿಕ್ರಮಣ ಜಾಗ ತೆರವು: ಶಾಲೆಗೆ ಮರಳಿದ ಜಾಗ ವೀಕ್ಷಿಸಿದ ಶಾಸಕ ಪೊನ್ನಣ್ಣ
admincoorgdaily

ಚೆಂಬು:ಇತ್ತೀಚೆಗೆ ಚೆಂಬು ಪ್ರೌಢಶಾಲೆ ಜಾಗ ಅತಿಕ್ರಮಣ ವಿವಾದಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅವರ ಸೂಚನೆ ಮೇರೆಗೆ ಸರ್ವೆ ನಡೆಸಿ ಅತಿಕ್ರಮಣವಾಗಿದ್ದ ಜಾಗವನ್ನು ಮರಳಿ ಶಾಲೆಗೆ ಒದಗಿಸಲಾಗಿದ್ದು, ಅದನ್ನು ವೀಕ್ಷಿಸಲು ಶಾಸಕರು ಪ್ರೌಢಶಾಲೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದು ಶಾಸಕರ ಸಮಾಜಮುಖಿ ಕಾರ್ಯಕ್ಕೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೌಕತ್ ಆಲಿ, ವಲಯ ಅಧ್ಯಕ್ಷ ರವಿರಾಜ್ ಹೊಸೂರು, ಪಕ್ಷದ ಮುಖಂಡರಾದ ಸೂರಜ್ ಹೊಸೂರು, ಚೆನ್ನಪ್ಪ, ಪದ್ಮನಾಭ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.