Kodagu

ವಿರಾಜಪೇಟೆಯಲ್ಲಿ ಬಿಜೆಪಿಗೆ ಚೆರಿಯಪಂಡ ಸುರೇಶ್ ನಂಜಪ್ಪನೇ ಫೇವರೇಟ್; ಕೂರ್ಗ್ ಡೈಲಿ POLL ನಲ್ಲಿ ಶೇ.55% ಒಲವು

admincoorgdaily

ವಿರಾಜಪೇಟೆಯಲ್ಲಿ ಬಿಜೆಪಿಗೆ ಚೆರಿಯಪಂಡ ಸುರೇಶ್ ನಂಜಪ್ಪನೇ ಫೇವರೇಟ್; ಕೂರ್ಗ್ ಡೈಲಿ POLL ನಲ್ಲಿ ಶೇ.55% ಒಲವು
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೇವಲ ಒಂದು ವರ್ಷದಲ್ಲಿ ಅತೀ ಹೆಚ್ಚು ಓದುಗರನ್ನು ಸಂಪಾದಿಸಿರುವ ಜಿಲ್ಲೆಯ ವಿಶ್ವಾಸಾರ್ಹ ಹಾಗೂ ಕ್ಷಣ ಕ್ಷಣದ ಸುದ್ದಿಗಳನ್ನು ವೇಗವಾಗಿ ಜನರಿಗೆ ತಲುಪಿಸುವ ಕೂರ್ಗ್ ಡೈಲಿ‌ ಸುದ್ದಿತಾಣವು ವಿರಾಜಪೇಟೆ ಕ್ಷೇತ್ರದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಆನ್‌ಲೈನ್ POLL ನಡೆಸಿತು.

ಮುಂದಿನ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಕೂರ್ಗ್ ಡೈಲಿ ನಡೆಸಿರುವ POLL ನಲ್ಲಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ ಅವರ ಪರವಾಗಿ ಶೇಕಡಾ 55% ರಷ್ಟು ಮಂದಿ ಒಲವು ತೋರಿದ್ದಾರೆ.

ಫಲಿತಾಂಶ ಹೀಗಿದೆ:

- ಚೆರಿಯಪಂಡ ಸುರೇಶ್ ನಂಜಪ್ಪ - 55%
- ಶಾಂತೆಯಂಡ ರವಿ ಕುಶಾಲಪ್ಪ - 14%
- OTHERS - 10%
- ಕೆ.ಜಿ. ಬೋಪಯ್ಯ - 8%
- ನೆಲ್ಲಿರ ಚಲನ್ ಕುಮಾರ್ - 5%
- ಸಜನ್ ಪೂವಯ್ಯ - 5%
- ತೇಲಪಂಡ ಶಿವಕುಮಾರ್ ನಾಣಯ್ಯ - 3%