Kodagu

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಅವರ ವಿಧಾನಸೌಧ ನೂತನ ಕಚೇರಿ ಉದ್ಘಾಟನೆ

admincoorgdaily

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಅವರ ವಿಧಾನಸೌಧ ನೂತನ ಕಚೇರಿ ಉದ್ಘಾಟನೆ
ಬೆಂಗಳೂರು, ಸೆ.09: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ವಿಧಾನಸೌಧದ ನೂತನ ಆಡಳಿತ ಕಚೇರಿಯ ಉದ್ಘಾಟನೆ ನಡೆಯಿತು.

ವಿಧಾನಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 260 ರಲ್ಲಿ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಆಡಳಿತ ನಡೆಸಲಿದ್ದಾರೆ. ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಶಾಸಕರು ತಮ್ಮ ನೂತನ ಕಚೇರಿಗೆ ಶುಭ ಪ್ರವೇಶ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ, ಹಿರಿಯ ಸಹೋದರ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಮತ್ತು ಕುಟುಂಬದವರು, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಹಿರಿಯ ವಕೀಲ ಚಂದ್ರಮೌಳಿ ಉಪಸ್ಥಿತರಿದ್ದರು.

ಇದಲ್ಲದೆ ಡಿಸಿಸಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪೊನ್ನಂಪೇಟೆಯ ಮಿದೇರಿರ ನವೀನ್, ವಿರಾಜಪೇಟೆಯ ಪಟ್ಟಡ ರಂಜಿ ಪೂಣಚ್ಚ, ನಾಪೋಕ್ಲುವಿನ ಸೌಕತ್ ಆಲಿ, ವಿವಿಧ ಅಕಾಡೆಮಿ ಅಧ್ಯಕ್ಷರುಗಳು, ವಲಯ ಅಧ್ಯಕ್ಷರುಗಳು, ಬೂತ್ ಅಧ್ಯಕ್ಷರುಗಳು, ಸರ್ಕಾರದ ನಾಮನಿರ್ದೇಶಿತ ಅಧ್ಯಕ್ಷರು-ಸದಸ್ಯರು, ಮಹಿಳಾ ಘಟಕ, ಪ್ರಚಾರ ಸಮಿತಿ, ಯುವ ಕಾಂಗ್ರೆಸ್, ಒಬಿಸಿ, ಎಸ್‌ಟಿ, ಎಸ್‌ಸಿ ಮತ್ತು ಅಲ್ಪಸಂಖ್ಯಾತ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.

ಕ್ಷೇತ್ರದಿಂದ ಆಗಮಿಸಿದ್ದ ಪಕ್ಷದ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಶಾಸಕರಿಗೆ ಶುಭಾಶಯ ಕೋರಿದರು.