ಶಿರಂಗಾಲ ಗ್ರಾಮದಲ್ಲಿ ಮನೆಯಲ್ಲಿ ಮಕ್ಕಳಿಂದ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ
admincoorgdaily

ಕುಶಾಲನಗರ, ಸೆ.15 : ಕುಶಾಲನಗರ ತಾಲ್ಲೂಕಿನ ಶಿರಂಗಾಲ ಗ್ರಾಮದ ಕೋಟೆಯ
ಎಸ್.ಆರ್.ಶಿವಪ್ರಸಾದ್ ಅವರ ಮನೆಯಲ್ಲಿ ತಮ್ಮ ಮಗಳಾದ
ಎಸ್. ಕೃತಿಕ ಪ್ರಸಾದ್ ಮತ್ತು ಮಗ ಎಸ್ .ಭರತೇಶ್ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವದ ಅಂಗವಾಗಿ
ಮಣ್ಣಿನ ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ತಯಾರಿಸಿ ಪ್ರತಿಷ್ಠಾಪಿಸಿರುವುದು ಗಮನ ಸೆಳೆದಿದೆ. ಈ ಮಕ್ಕಳ ಪರಿಸರ ಕಾಳಜಿಗೆ ಪೋಷಕರಾದ
ತಂದೆ ಎಸ್.ಆರ್.ಶಿವಪ್ರಸಾದ್ ಮತ್ತು ತಾಯಿ ಚಂಪಕ ಅವರ ಪ್ರೇರೇಣೆ ಮತ್ತು ಸಹಕಾರ ಕಾರಣವಾಗಿದೆ.
ಕೂಡಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ
ವಿದ್ಯಾರ್ಥಿನಿ ಎಸ್. ಕೃತಿಕ ಪ್ರಸಾದ್ , ತಮ್ಮ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ರಾಸಾಯನಿಕ ಬಣ್ಣ ಮುಕ್ತ ನೈಸರ್ಗಿಕ ಗಣೇಶ ಮೂರ್ತಿಯನ್ನು ತಯಾರಿಸುವ ಮೂಲಕ ಜನರಲ್ಲಿ ಪರಿಸರ ಕಾಳಜಿ ಮೂಡಿಸುತ್ತಿರುವುದು ಮಾದರಿಯಾದುದು ಎಂದು ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ಶ್ಲಾಘಿಸಿದ್ದಾರೆ.