ಗೋಣಿಕೊಪ್ಪದಲ್ಲಿ ಅ.12 ರಂದು ಮಕ್ಕಳ ದಸರಾ
admincoorgdaily

ಗೋಣಿಕೊಪ್ಪ:ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ಗೋಣಿಕೊಪ್ಪ ದಸರಾ ಆಚರಣೆಯ ಅಂಗವಾಗಿ ಮಕ್ಕಳ ದಸರಾ ಕಾರ್ಯಕ್ರಮವು ಅಕ್ಟೋಬರ್ 12 ರಂದು ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ.
ಮಕ್ಕಳ ಸಂತೆ:* 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಒಂದು ತಂಡದಲ್ಲಿ 1 ರಿಂದ 3 ಮಕ್ಕಳಿಗೆ ಅವಕಾಶ.
ಕ್ರೀಡಾ ಸ್ಪರ್ಧೆಗಳು:
- ನಿಧಾನ ಸೈಕಲ್ ಚಾಲನೆ: 5 ರಿಂದ 7, ಹಾಗೂ 8 ರಿಂದ 10ನೇ ತರಗತಿ ವಿಭಾಗ
- ಬಕೆಟ್‌ಗೆ ಚೆಂಡು ಹಾಕುವುದು: 1 ರಿಂದ 4ನೇ ತರಗತಿ
- ಕಪ್ಪೆ ಹಾರುವುದು: ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ
- ಗೋಣಿಚೀಲ ಓಟ: 1 ರಿಂದ 5, 6 ರಿಂದ 7, 8 ರಿಂದ 10ನೇ ತರಗತಿ ವಿಭಾಗ
ಸಾಂಸ್ಕೃತಿಕ ಸ್ಪರ್ಧೆಗಳು:
- ಸಾಮೂಹಿಕ ನೃತ್ಯ: ಒಂದು ತಂಡದಲ್ಲಿ 8 ರಿಂದ 14 ಮಕ್ಕಳಿಗೆ ಅವಕಾಶ. 4 ನಿಮಿಷ ಕಾಲಾವಕಾಶ. ರಿಮಿಕ್ಸ್ ಅಥವಾ ಫ್ಯೂಷನ್ ಗೀತೆಗಳಿಗೆ ಅವಕಾಶವಿಲ್ಲ. 1 ರಿಂದ 4, 5 ರಿಂದ 7, 8 ರಿಂದ 10ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ.
- ಛದ್ಮವೇಷ ಸ್ಪರ್ಧೆ: ಎಲ್‌ಕೆಜಿ, ಯುಕೆಜಿ, 1 ರಿಂದ 5ನೇ ತರಗತಿ, ಹಾಗೂ 6 ರಿಂದ 10ನೇ ತರಗತಿ ವಿಭಾಗದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ 7349064886, 9741664173, 9449310249 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಸಮಿತಿ ತಿಳಿಸಿದೆ.