Kodagu

ಶಿಕ್ಷಕರ ವೈವಿಧ್ಯಮಯ ಪ್ರತಿಭೆಯ ಅನಾವರಣ; ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ

admincoorgdaily

ಶಿಕ್ಷಕರ ವೈವಿಧ್ಯಮಯ ಪ್ರತಿಭೆಯ ಅನಾವರಣ;  ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ
1002819113.jpg


ಮಡಿಕೇರಿ, ನ. 14: 
ನಗರದ 
ಕೊಡಗು ವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆಯನ್ನು ಶಿಕ್ಷಕರು ತಮ್ಮ ವಿಶಿಷ್ಟ ಪ್ರತಿಭೆ, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಿದರು. .

ಶಾಲೆಯ ಶ್ರೀ ಬಿ.ಕೆ. ಸುಬ್ಬಯ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ನಾಯಕರಾದ ನಿರಂಜನ್ ಎನ್. ಮತ್ತು ನಾಯಕಿಯಾದ ಲಕ್ಷ್ಯ ಪೊನ್ನಕ್ಕ ಸಾಂಸ್ಕೃತಿಕ ನಾಯಕಿ ಶ್ರೀಯ ಕಿರಣ್ ಹಾಗೂ ಕ್ರೀಡಾ ನಾಯಕಿ ತೇಜಲ್ ಬೋಪಯ್ಯ ವಹಿಸಿದ್ದರು.

ಶಿಕ್ಷಕಿಯರಾದ ಚಿತ್ರಾ ನಂಜಪ್ಪ, ರಾಜೇಶ್ವರಿ ಹಾಗೂ ಮಮತಾ ಅವರಿಂದ ಮೂಡಿಬಂದ ಸ್ವಾಗತ ನೃತ್ಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದ ಜಾದುಗಾರ ವಿಕ್ರಂ ಶೆಟ್ಟಿ ಅವರ ಮ್ಯಾಜಿಕ್ ಪ್ರದರ್ಶನ ಮಕ್ಕಳಲ್ಲಿ ಅಚ್ಚರಿ, ಕುತೂಹಲ ಹಾಗೂ ನಗುವಿನ ಅಲೆಗಳನ್ನು ಮೂಡಿಸಿತು. 

ಶಿಕ್ಷಕಿ ಜಯಶ್ರೀ ಅವರ ತಂಡದಿಂದ ಮೂಡಿಬಂದ ಹಾಸ್ಯಮಯ ನಾಟಕವು ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿತು.

 ಶಿಕ್ಷಕರು ವಿವಿಧ ಕ್ಷೇತ್ರಗಳ ವಿಶಿಷ್ಟ ಉಡುಗೆ-ತೊಡುಗೆಗಳಲ್ಲಿ ಭಾಗವಹಿಸಿದ ಆಕರ್ಷಕ ರ್ಯಾಂಪ್ ವಾಕ್ ಕೂಡ ಪ್ರೇಕ್ಷಕರ ಗಮನ ಸೆಳೆಯಿತು.

 ಶಿಕ್ಷಕರ ಗಾಯನ ಕಾರ್ಯಕ್ರಮವೂ ಮಕ್ಕಳಿಗೆ ಮನರಂಜನೆಯ ರಸದೌತಣ ನೀಡಿತು. 

 ಶಿಕ್ಷಕಿ ದಿವ್ಯ ಮತ್ತು ತಂಡದಿಂದ ನಡೆದ ನೃತ್ಯವು ಸಂಭ್ರಮದ ಕಳೆ ಹೆಚ್ಚಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.

 ಶಾಲಾ ನಾಯಕ ನಿರಂಜನ್ ಎನ್. ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಮಕ್ಕಳಿಗಾಗಿ ಶಿಕ್ಷಕರೇ ವಿವಿಧ ರೂಪಗಳಲ್ಲಿ ಸಿದ್ಧರಾಗಿ, ತಮ್ಮಲ್ಲಿರುವ ಗಾಯನ, ನೃತ್ಯ, ಅಭಿನಯ ಹಾಗೂ ಹಾಸ್ಯ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದು ಈ ಬಾರಿಯ ಮಕ್ಕಳ ದಿನಾಚರಣೆಯ ವಿಶೇಷವಾಗಿತ್ತು. 
ವೀಣಾ ಹೊಳ್ಳ ಪ್ರಾರ್ಥಿಸಿ, ಚಿತ್ರಾ ನಂಜಪ್ಪ ಸ್ವಾಗತಿಸಿ .ಶಿಕ್ಷಕಿಯರಾದ ರೇಖಾ ಕೆ.ಕೆ. ಮತ್ತು ಜಯಶ್ರೀ ಎನ್. ನಿರೂಪಿಸಿ, 
ಶಿಕ್ಷಕಿ ಸೋನಾ ಮುತ್ತಮ್ಮ ವಂದಿಸಿದರು.