Kodagu

ಅ.16 ರಂದು ಮಕ್ಕಳ ದಸರಾ ಸಂಭ್ರಮ - ಮಕ್ಕಳಿಂದ ವೈವಿಧ್ಯಮಯ ಸ್ಪಧೆ೯ಗಳು

admincoorgdaily

ಅ.16 ರಂದು ಮಕ್ಕಳ ದಸರಾ ಸಂಭ್ರಮ - ಮಕ್ಕಳಿಂದ ವೈವಿಧ್ಯಮಯ ಸ್ಪಧೆ೯ಗಳು
ಮಡಿಕೇರಿ;ಮಡಿಕೇರಿ ಜನೋತ್ಸವ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅ.16 ರಂದು ಶುಕ್ರವಾರ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 13 ನೇ ವಷ೯ದ ಮಕ್ಕಳ ದಸರಾ ಆಯೋಜಿತವಾಗಿದೆ.


ಅಕ್ಟೋಬರ್ 16 ರಂದು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ 13 ನೇ ವಷ೯ದ ಮಕ್ಕಳ ದಸರಾವನ್ನು ಜಿಲ್ಲಾಧಿಕಾರಿ ಎಸ್..ಜಿ.ಸೋಮಶೇಖರ್, ಉದ್ಗಾಟಿಸಲಿದ್ದಾರೆ. ಮಕ್ಕಳ ಸಂತೆ, ಅಂಗಡಿ ಸ್ಪಧೆ೯ಯನ್ನು ರೋಟರಿ ಜಿಲ್ಲೆ 3181 ನ ರಾಜ್ಯಪಾಲ ಸತೀಶ್ ಭೊಳಾರ್, ಉದ್ಘಾತಿಸಲಿದ್ದು , ರೋಟರಿ ವಲಯ 6 ರ ಸಹಾಯಕ ಗವನ೯ರ್ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್, ಕಾಯ೯ದಶಿ೯ ಡಾ.ಜಿ.ಡಿ. ಚೇತನ್, ಮಡಿಕೇರಿ ನಗರಸಭೆಯ ಅಧ್ಯಕ್ಷೆ ಪಿ.ಕಲಾವತಿ, ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.

 ಮಕ್ಕಳಿಂದ ಸಂತೆ - ಮಕ್ಕಳಿಂದ ಅಂಗಡಿ, ಮಕ್ಕಳಿಂದ ಛದ್ನವೇಷ ,ಮಕ್ಕಳಿಂದ ಕ್ಲೇಮಾಡೆಲಿಂಗ್, ಮಕ್ಕಳಿಂದ ಮಂಟಪ ರಚನೆಯ ಸ್ಪಧೆ೯ಗಳು ಮನಸೆಳೆಯಲಿವೆ.
ನೂರಾರು ಮಕ್ಕಳು ಈ ಬಾರಿಯೂ ಮಕ್ಕಳ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದೂ ಅನಿಲ್ ತಿಳಿಸಿದ್ದಾರೆ.