Kodagu

ಚೋಕಂಡಳ್ಳಿ ನಲ್ವತೋಕ್ಲು SKSSF ಯೂನಿಟ್ ವಾರ್ಷಿಕ ಮಹಾಸಭೆ:ನೂತನ ಸಮಿತಿ ಆಯ್ಕೆ

admincoorgdaily

ಚೋಕಂಡಳ್ಳಿ ನಲ್ವತೋಕ್ಲು SKSSF ಯೂನಿಟ್ ವಾರ್ಷಿಕ ಮಹಾಸಭೆ:ನೂತನ ಸಮಿತಿ ಆಯ್ಕೆ
ವಿರಾಜಪೇಟೆ: ಚೋಕಂಡಳ್ಳಿ ನಲ್ವತೋಕ್ಲು SKSSF ಯೂನಿಟ್ ವತಿಯಿಂದ ಸಮಸ್ತ ಪ್ರಾರ್ಥನಾ ದಿನಾಚರಣೆ ಹಾಗೂ ವಾರ್ಷಿಕ ಮಹಾಸಭೆ ಜರುಗಿತು.

ಯೂನಿಟ್ ಅಧ್ಯಕ್ಷ ರಶೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಜುನೈದ್ ಫೈಝಿ ಪೆರುಂಬಾಡಿ ಉದ್ಘಾಟಿಸಿದರು. ವಿರಾಜಪೇಟೆ ವಲಯ ಕಾರ್ಯದರ್ಶಿ ಅಬ್ದುಲ್ ಹಕೀಮ್ ಹಿಶಾಮಿ ಮುಖ್ಯ ಭಾಷಣ ಮಾಡಿ, ಕಾರ್ಯಕರ್ತರು ಸಮಸ್ತ ಉಲಮಾಗಳ ಜೀವನ ಮಾದರಿಯಾಗಿ ಬದುಕಬೇಕು ಎಂದರು. ಹಿಶಾಮಿ ಉಸ್ತಾದ್ ದುವಾ ಮಜ್ಲಿಸ್ ನೇತೃತ್ವ ವಹಿಸಿದ್ದರು.

2026-27ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನೌಫಲ್ P.M, ಪ್ರಧಾನ ಕಾರ್ಯದರ್ಶಿಯಾಗಿ ಸಹದ್ ಫೈಝಿ, ಖಜಾಂಜಿಯಾಗಿ ಶಂಸುದ್ದೀನ್ K.U, ನಿರ್ವಾಹಕ ಕಾರ್ಯದರ್ಶಿಯಾಗಿ ನೌಶಾದ್ ದಾರಿಮಿ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಜೈನುದ್ದೀನ್ ಮುಸ್ಲಿಯಾರ್, ಜಿಯಾದ್ ದಾರಿಮಿ, ಉಸೈನ್ ಹಾಗೂ ಕಾರ್ಯದರ್ಶಿಗಳಾಗಿ ನೌಶಾದ್ P.F, ಅಜೀಜ್ P.A, ಜಿಯಾದ್ ಬಾಖವಿ ಜೊತೆಗೆ 10 ಮಂದಿ ಎಕ್ಸಿಕ್ಯೂಟಿವ್ ಸದಸ್ಯರು ಆಯ್ಕೆಯಾದರು.
ನೌಶಾದ್ ದಾರಿಮಿ ಸ್ವಾಗತಿಸಿ, ಸಹದ್ ಫೈಝಿ ವಂದಿಸಿದರು.