ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್ ಅವರಿಗೆ ನಾಗರಿಕ ಸನ್ಮಾನ
admincoorgdaily

ಕುಶಾಲನಗರ, ಸೆ 27: ಸಾಮಾಜಿಕ ಹೋರಾಟಗಾರ ವಿಪಿ ಶಶಿಧರ್ ರವರಿಗೆ ವಿಚಾರ ಸಂಕಿರಣ ದೊಂದಿಗೆ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಕುಶಾಲನಗರದ ಎಸ್.ಎಲ್.ಎನ್. ಸ್ಕೇರ್ ನಲ್ಲಿ ರವಿವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಶಿಕ್ಷಕ ನಜೀರ್ ಅಹ್ಮದ್ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿದ್ದು ಹಿರಿಯ ಪತ್ರಕರ್ತ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಚಾರ ಮಂಡನೆಯನ್ನು ಸಾಮಾಜಿಕ ಚಿಂತಕ ಮುನಿರ್ ಕಾಟಿಪಳ್ಳ ಮಾಡಿದರು.
ನಂತರ ನಡೆದ ವಿ.ಪಿ. ಶಶಿಧರ್ ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಎ. ಎಸ್. ಪೊನ್ನಣ್ಣ ಸಭೆಯನ್ನುದ್ದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗು ವಿವಿ ಕುಲಪತಿ ಅಶೋಕ್ ಸಂಗಪ್ಪ ಆಲೂರ, ಶಕ್ತಿ ದಿನಪತ್ರಿಕೆ ಸಂಪಾದಕ ಚಿದ್ವಿಲಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಮುಖಂಡ ಎಂ. ಲಕ್ಷಣ್, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೇಶವ ಕಾಮತ್ ,ಸಹಕಾರಿ ಧುರೀಣ ಟಿ. ಆರ್. ಶರವಣ ಕುಮಾರ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಆರ್. ಮಾದಪ್ಪ, ಜನಪರ ಹೋರಾಟಗಾರ ಪಿ. ಆರ್. ಭರತ್, ಕುಶಾಲನಗರ ರೆಡ್ ಕ್ರಾಸ್ ಅಧ್ಯಕ್ಷ ಎಸ್. ಕೆ. ಸತೀಶ್, , ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ. ಎಸ್. ನಾಗೇಶ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ. ಪಿ. ಚಂದ್ರಕಲಾ, ಜಿ.ಪಂ. ಮಾಜಿ ಅಧ್ಯಕ್ಷ ದೀರ್ಘಕೇಶಿ ಶಿವಣ್ಣ, ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ, ವಕೀಲರ ಸಂಘದ ಅಧ್ಯಕ್ಷ ಆರ್. ಕೆ. ನಾಗೇಂದ್ರ ಬಾಬು, ಸಾಮಾಜಿಕ ಹೋರಾಟಗಾರ ಡಿ.ಎಸ್ ನಿರ್ವಾಣಪ್ಪ, ಚಿಂತಕ ನಂದಾ ಸುಬ್ಬಯ್ಯ , ರೋಟರಿ ಸಂಸ್ಥೆಯ ಮನು ಪೆಮ್ಮಯ್ಯ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವರದಿ: ಶ್ರೀಧರ್ ನಾರಾಯಣ್