Kodagu

ಸೆ.27ರಂದು ವಿ.ಪಿ. ಶಶಿಧರ್‌ಗೆ ನಾಗರಿಕ ಸನ್ಮಾನ

admincoorgdaily

ಸೆ.27ರಂದು ವಿ.ಪಿ. ಶಶಿಧರ್‌ಗೆ ನಾಗರಿಕ ಸನ್ಮಾನ
ಕುಶಾಲನಗರ:ಅಸಹಾಯಕ ಬಡವರ, ಶೋಷಿತರ ಹಾಗೂ ದುರ್ಬಲರ ಧ್ವನಿಯಾಗಿ, ಸುಧೀರ್ಘ 35 ವರ್ಷಗಳ ಕಳಂಕರಹಿತ ಸಾರ್ವಜನಿಕ ಬದುಕನ್ನು ಜನಸೇವೆಗೆ ಸಮರ್ಪಿಸಿಕೊಂಡು, ಅನ್ಯಾಯ, ಅಕ್ರಮ, ಭ್ರಷ್ಟ ವ್ಯವಸ್ಥೆಯ ವಿರುದ್ಧ ಎದೆಗಾರಿಕೆಯಿಂದ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ವಿ.ಪಿ. ಶಶಿಧರ್ ಅವರಿಗೆ ಪ್ರೀತಿ ಹಾಗೂ ಅಭಿಮಾನಪೂರ್ವಕ ನಾಗರಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಮಾನ ಮನಸ್ಕ ಹಾಗೂ ಹಿತೈಷಿಗಳ ಬಳಗದ ಪ್ರಮುಖರಾದ ಅಬ್ದುಲ್ ರಜಾಕ್ ತಿಳಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಮಂದಿಯ ದಶಕಗಳ ಕಾವೇರಿ ತಾಲ್ಲೂಕಿನ ಕನಸನ್ನು ಸಾಕಾರಗೊಳಿಸುವಲ್ಲಿ ತಪಸ್ಸಿಯಂತೆ ಅವಿಶ್ರಾಂತವಾಗಿ ಶ್ರಮಿಸಿದ ಧಣಿವರಿಯದ ಹೋರಾಟಗಾರ ವಿ.ಪಿ. ಶಶಿಧರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

ಇದೇ ಸೆಪ್ಟೆಂಬರ್ 27ರ ಭಾನುವಾರ ಸಂಜೆ 4 ಗಂಟೆಗೆ ತಾವರೆಕೆರೆಯ ಎಸ್.ಎಲ್.ಎನ್ ಗ್ರ್ಯಾಂಡ್ ಕನ್ವೆನ್ಷನ್ ಹಾಲ್‌ನಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೊಡಗು ಜಿಲ್ಲೆಯ ಸಮಾನ ಮನಸ್ಕರು ಹಾಗೂ ಹಿತೈಷಿಗಳ ಬಳಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ವಿ.ಎಸ್. ಆನಂದ್, ಕೃಷ್ಣೇಗೌಡ, ಚಂದನ್, ನವೀನ್ ಮೂರ್ತಿ. ನವೀದ್ ಖಾನ್.. ಸುಂಟಿಕೊಪ್ಪದ ರಫೀಕ್ ಖಾನ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.