ಮಡಿಕೇರಿಯಲ್ಲಿ ಕಾಫಿ ದಸರಾ - ಮಳಿಗೆ ತೆರೆಯಲು ಅವಕಾಶ
admincoorgdaily

ಮಡಿಕೇರಿ;ಮಡಿಕೇರಿಯಲ್ಲಿ ಜನೋತ್ಸವ ದಸರಾ ಪ್ರಯುಕ್ತ ಅಕ್ಟೋಬರ್ 13 ಮತ್ತು 14 ರಂದು ಆಯೋಜಿತ ಕಾಫಿ ದಸರಾದಲ್ಲಿ ಮಳಿಗೆ ತೆರೆಯಲು ಹೆಸರು ನೋಂದಾಯಿಸಿಕೊಳ್ಳುವಂತೆ ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಪರಿಕಲ್ಪನೆಯಲ್ಲಿ ಅಕ್ಟೋಬರ್ 13 ಮತ್ತು 14 ರಂದು ನಗರದ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಆಯೋಜಿಸಲಾಗಿದ್ದು, ಕಾಫಿ ಕೆಫೆ, ಕಾಫಿ ಕೖಷಿ ಸಂಬಂಧಿತ ಮಾಹಿತಿ ಮಳಿಗೆ, ಕಾಫಿಯ ವೈವಿಧ್ಯಮಯ ಉತ್ಪನ್ನ, ಕಾಫಿ ಸಂಬಂಧಿತ ಕೖಷಿ ಮಾಹಿತಿ, ಕಾಫಿಯಲ್ಲಿ ನವನವೀನ ಅವಿಷ್ಕಾರಗಳ ಮಾಹಿತಿ ನೀಡುವ ಮಳಿಗೆಗಳಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 13 ರ ಮಂಗಳವಾರ ಸಂಜೆ 4 ಗಂಟೆಯಿಂದ 14 ರ ಬುಧವಾರ ರಾತ್ರಿ 10 ಗಂಟೆಯವರೆಗೆ ಮಳಿಗೆಗಳನ್ನು ತೆರೆಯಬಹುದಾಗಿದೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ. ಆಸಕ್ತರು ಅಕ್ಟೋಬರ್ 5ರೊಳಗಾಗಿ ಹೆಸರು ನೋಂದಾಯಿಸಲು ಸಂಪಕ೯ ಸಂಖ್ಯೆ - ವಿನೋದ್ ಮೂಡಗದ್ದೆ - 9535615759.