Kodagu

ಸೆ.23ಕ್ಕೆ ಕಾಫಿ ಬೆಳೆಗಾರರ ಸಂಘದ ಮಹಾಸಭೆ

admincoorgdaily

ಸೆ.23ಕ್ಕೆ ಕಾಫಿ ಬೆಳೆಗಾರರ ಸಂಘದ ಮಹಾಸಭೆ
ಮಡಿಕೇರಿ: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ 61ನೇ ವಾರ್ಷಿಕ ಮಹಾಸಭೆಯು ಸೆ.23ರ ಮಧ್ಯಾಹ್ನ 12.30ಕ್ಕೆ ಮಡಿಕೇರಿಯ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘ ರೂ.67.49 ಲಕ್ಷ ನಿವ್ವಳ ಲಾಭ ಗಳಿಸಿದೆ. ಪೆಟ್ರೋಲ್ ಬಂಕ್, ಕಾಫಿ ಪುಡಿ, ಜೇನು ಮಾರಾಟ ಹಾಗೂ ಕಟ್ಟಡ ಬಾಡಿಗೆಯಿಂದ ಈ ಆದಾಯ ಬಂದಿದೆ ಎಂದರು.
ಕಾಫಿ ಮಂಡಳಿ ಜೊತೆಗಿನ ವ್ಯಾಜ್ಯ ಇತ್ಯರ್ಥ ಹಂತದಲ್ಲಿದ್ದು, ಬಡ್ಡಿ ಮನ್ನಾಕ್ಕಾಗಿ ಸಂಸದ ಯದುವೀರ್ ಒಡೆಯರ್ ಅವರು ಕೇಂದ್ರ ಸಚಿವರೊಂದಿಗೆ ಚರ್ಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅಪ್ಪಚಿರ ಎಂ.ದೇಚಮ್ಮ, ಉಪಾಧ್ಯಕ್ಷ ಸುರೇಶ್, ನಿರ್ದೇಶಕರಾದ ಎಂ.ಬಿ.ದೇವಯ್ಯ, ಕೆ.ತುಳಸಿ ಮೋಹನ್, ಸಂದೀಪ್, ವರದರಾಜ ಅರಸ್ ಉಪಸ್ಥಿತರಿದ್ದರು.