Kodagu

ಮಡಿಕೇರಿ ಕಾಫಿ ದಸರಾದಲ್ಲಿ ಕಾಫಿ ಖಾದ್ಯ ಸ್ಪಧೆ೯ಗಳು

admincoorgdaily

ಮಡಿಕೇರಿ ಕಾಫಿ  ದಸರಾದಲ್ಲಿ   ಕಾಫಿ ಖಾದ್ಯ  ಸ್ಪಧೆ೯ಗಳು
ಮಡಿಕೇರಿ  ಅ.2-  ಮಡಿಕೇರಿ ದಸರಾ ಜನೋತ್ಸವದಲ್ಲಿನ  ಮೂರನೇ ವಷ೯ದ  ಕಾಫಿ ದಸರಾ ಅಂಗವಾಗಿ ಕಾಫಿಯಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳ ಸ್ಪಧೆ೯ ಆಯೋಜಿಸಲಾಗಿದೆ .ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.  

 ಅಕ್ಟೋಬರ್ 14 ರಂದು ಬುಧವಾರ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ  ಕಾಫಿ ದಸರಾ ಅಂಗವಾಗಿನ ಫ್ಲೇವರ್ಸ್ ಆಫ್ ಕಾಫಿ ಹೆಸರಿನ  ಖಾದ್ಯ ಸ್ಪಧೆ೯ಗಳು  ಆಯೋಜಿತವಾಗಿದೆ.

ಕಾಫಿ ಫ್ಲೆವರ್  ಕೇಕ್, ವಿಭಾಗ,, ಕಾಫಿ ಫ್ಲೆವರ್ ಕಪ್ ಕೇಕ್ ವಿಭಾಗ, ಕಾಫಿ ಫ್ಲೆವರ್ ಬ್ರೌನಿ ವಿಭಾಗ,ಕಾಫಿ ಫ್ಲೆವರ್  ಚಾಕೋಲೇಟ್, ಪುಡ್ಡಿಂಗ್  ವಿಭಾಗ, ಕಾಫಿ ಫ್ಲೆವರ್  ಪಾನೀಯ  ವಿಭಾಗ,    ಕಾಫಿ ಫ್ಲೇವರ್ ನಲ್ಲಿ  ಹೊಸ ಪ್ರಯತ್ನ   ವಿಭಾಗಗಳಲ್ಲಿ   ಸ್ಪಧೆ೯ ಆಯೋಜಿತವಾಗಿದೆ.

ಈ ಎಲ್ಲಾ ಸ್ಪಧೆ೯ಗಳಿಗ ಸ್ಪಧಿ೯ಗಳು  ಅಕ್ಟೋಬರ್ 10 ರೊಳಗಾಗಿ  ಹೆಸರು ನೋಂದಾಯಿಸಲು ಸಂಪಕ೯ ಸಂಖ್ಯೆ -  ಮೇಪಾಡಂಡ . ಸವಿತಾ  ಕೀತ೯ನ್  6366 462413