ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗೋಣಿಕೊಪ್ಪದಲ್ಲಿ ದೂರು ದಾಖಲು; ಕೇರಳದ ಜನರು, ಮಲೆಯಾಳಿ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ
admincoorgdaily

ಗೋಣಿಕೊಪ್ಪ;ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೇರಳದ ಜನರು ಹಾಗೂ ಮಲೆಯಾಳಿ ಸಮುದಾಯ ದ ವಿರುದ್ಧ ಅವಹೇಳನಕಾರಿ, ನಿಂದನಾತ್ಮಕ ಹಾಗೂ ದ್ವೇಷ ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಿರುವ ಕುರಿತು ಗೋಣಿಕೊಪ್ಪ ಕೊಡಗು ಹಿಂದೂ ಮಲಯಾಳಿ ಸಮಾಜದಿದ ಇಂದು ದೂರು ದಾಖಲಿಸಲಾಗಿದೆ.
ಈ ಸಂದರ್ಭ ಕೊಡಗು ಹಿಂದೂ ಸಮಾಜದ ಅಧ್ಯಕ್ಷರಾದ. ಕೆ. ಪಿ. ಪ್ರಶಾಂತ್ ಕುಮಾರ್.
ಸ್ಥಾಪಕ ಅಧ್ಯಕ್ಷ ರಾದ ಪಿ. ಎಸ್. ಶರತ್ ಕಾಂತ್, ಹಿರಿಯ ಉಪಾಧ್ಯಕ್ಷರಾದ ವೇಣುಕಣ್ಣನ್, ಸಮಾಜದ ಕಾನೂನು ಸಲಹೆಗಾರರಾದ, ಕೆ. ಬಿ. ಸಂಜೀವ್, ಸಮಾಜದ ಮಾಜಿ ಗೌರವ ಅಧ್ಯಕ್ಷರಾದ , ಪಿ. ಭಾಸ್ಕರ್, ಸದಸ್ಯರುಗಳಾದ, ವಿ..ಆರ್, ಸುಧೀರ್.. ಸಪ್ತೇಶ್ ರಾಮಕೃಷ್ಣನ್.. ಮಣಿಕಂಠ. ಕೆ ರಾಘವನ್ ಏ, ಏ.ಹಾಜರಿದ್ದರು...