State News

ಬೆಂಗಳೂರನ್ನು ಜಾಗತಿಕ ಮಹಾನಗರವನ್ನಾಗಿ ರೂಪಿಸಲು ಸಮಗ್ರ ಆರ್ಥಿಕ ಅಭಿವೃದ್ಧಿ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

admincoorgdaily

ಬೆಂಗಳೂರನ್ನು ಜಾಗತಿಕ ಮಹಾನಗರವನ್ನಾಗಿ ರೂಪಿಸಲು ಸಮಗ್ರ ಆರ್ಥಿಕ ಅಭಿವೃದ್ಧಿ ಯೋಜನೆ: ಸಿಎಂ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ
ಬೆಂಗಳೂರು: ಬೆಂಗಳೂರು ಮಹಾನಗರದ ಸಮಗ್ರ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಯೋಜನೆ ಕುರಿತು ಬೆಂಗಳೂರಿನ ಕೃಷ್ಣಾ'ದಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು.

ಬೆಂಗಳೂರನ್ನು ಜಾಗತಿಕ ಮಟ್ಟದ ಮಹಾನಗರವಾಗಿ ಅಭಿವೃದ್ಧಿಪಡಿಸಲು, ಪಕ್ವವಾದ ಸ್ಥಳೀಯ ಯೋಜನೆ, ಸಮತೋಲನದ ಅಭಿವೃದ್ಧಿ ಚಿಂತನೆ ಹಾಗೂ ವಿವಿಧ ಇಲಾಖೆಗಳು ಮತ್ತು ಸರ್ಕಾರ ಸಂಘಟಿತವಾಗಿ ಉತ್ತಮ ಮೂಲಸೌಕರ್ಯ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮೂಲಕ ಯೋಜನೆಯನ್ನು ಸಾಕಾರಗೊಳಿಸಬಹುದು ಎಂಬ ಸಂದೇಶವನ್ನು ಸಭೆಯಲ್ಲಿ ನೀಡಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರು ಅಭಿವೃದ್ಧಿ ಹಾಗೂ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರು ವಹಿಸಿದ್ದರು.

ಸಭೆಯಲ್ಲಿ ಜಿಬಿಎ ಅಭಿವೃದ್ಧಿ ಸಚಿವರಾದ  ಕೃಷ್ಣ ಬೈರೇಗೌಡ,  ಗೃಹ,ಇ-ಆಡಳಿತ ಹಾಗೂ ಐಟಿ-ಬಿಟಿ ಸಚಿವರಾದ  ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕರಾದ  ಎ.ಎಸ್. ಪೊನ್ನಣ್ಣ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.