Kodagu

ಬಿಜೆಪಿ ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಮಡಿಕೇರಿಗೆ ಅಂಟಿದ್ದ ಶಾಪ ವಿಮೋಚನೆಯಾಗಿದೆ : ಮೂಡ ಅಧ್ಯಕ್ಷ ಬಿ.ವೈ.ರಾಜೇಶ್ ಅಸಮಾಧಾನ

admincoorgdaily

ಬಿಜೆಪಿ ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ : ಮಡಿಕೇರಿಗೆ ಅಂಟಿದ್ದ ಶಾಪ ವಿಮೋಚನೆಯಾಗಿದೆ : ಮೂಡ ಅಧ್ಯಕ್ಷ ಬಿ.ವೈ.ರಾಜೇಶ್ ಅಸಮಾಧಾನ
ಮಡಿಕೇರಿ: ನಗರಸಭೆಯ ಬಿಜೆಪಿ ಆಡಳಿತಾವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ಕಾಲಹರಣ ಮಾಡಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿಯಿಂದ ನಗರಸಭೆಯ ವರೆಗೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಬಿಜೆಪಿ ಆಡಳಿತದ ವೈಫಲ್ಯವನ್ನು ಖಂಡಿಸಿದರು. ಮಡಿಕೇರಿ ನಗರದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸದೆ ಮತ್ತು ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಐದು ವರ್ಷಗಳ ಅವಧಿಯನ್ನು ವ್ಯರ್ಥಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ಮಾತನಾಡಿ ಬಿಜೆಪಿ ಆಡಳಿತ ಪೂರ್ಣಗೊಳ್ಳುವ ಮೂಲಕ ಮಡಿಕೇರಿ ನಗರಕ್ಕೆ ಅಂಟಿದ್ದ ಶಾಪ ವಿಮೋಚನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಡಿಕೇರಿ ಜನತೆ ಬಿಜೆಪಿಗೆ 16 ಸ್ಥಾನಗಳ ಬಹುಮತವನ್ನು ನೀಡಿದ್ದರೂ ಜನರ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ. ಅಧಿಕಾರದಲ್ಲಿದ್ದ ಬಿಜೆಪಿ ಮಂದಿಯ ನಡುವಿನ ಭಿನ್ನಾಭಿಪ್ರಾಯಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದೆ. ನಗರಸಭೆಯಲ್ಲಿ ಹಣವಿದ್ದರೂ ಕಾಮಗಾರಿಗಳು ಅನುಷ್ಠಾನಗೊಂಡಿಲ್ಲ. ಕಳೆದ ಐದು ವರ್ಷಗಳ ಕಾಲ ಬಿಜೆಪಿ ಆಡಳಿತದಿಂದ ನಗರಕ್ಕೆ ಶಾಪ ತಟ್ಟಿದಂತ್ತಾಗಿದ್ದು, ಶೂನ್ಯ ಸಾಧನೆಯಾಗಿದೆ. ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದೇ ಇಲ್ಲವೆಂದು ಟೀಕಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ವಿಶೇಷ ಆಸಕ್ತಿ ವಹಿಸಿ ಜನಪರ ಕಾಳಜಿಯಿಂದ 6.50 ಕೋಟಿ ರೂ.ಗಳನ್ನು ಮಂಜೂರು ಮಾಡಿಸಿದ ಹಣದಲ್ಲಷ್ಟೇ ಕೆಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಗೆ ಸರಿಯಾದ ಪಾಠ ಕಲಿಸಲಿದ್ದು, ಉತ್ತಮ ಆಡಳಿತ ಮಂಡಳಿ ರಚನೆಯಾಗಲಿದೆ ಎಂದು ಬಿ.ವೈ.ರಾಜೇಶ್ ವಿಶ್ವಾಸ ವ್ಯಕ್ತಪಡಿಸಿದರು. 

ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಅವರು ಮಾತನಾಡಿ, ನಗರಸಭೆಯಲ್ಲಿ ಬಿಜೆಪಿ ಆಡಳಿತ ಮಂಡಳಿಯ ಅಧಿಕಾರ ಪೂರ್ಣಗೊಂಡಿರುವುದು ನಗರದ ಪಾಲಿಗೆ ಶುಭ ಘಳಿಗೆಯಾಗಿದೆ ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಮಾತನಾಡಿ, 16 ಮಂದಿ ಬಿಜೆಪಿ ಸದಸ್ಯರ ಆಡಳಿತ ಮಂಡಳಿ ಗುಂಪುಗಾರಿಕೆಗೆ ಸೀಮಿತವಾಗಿತ್ತು. ಯಾವುದೇ ಕಾಮಗಾರಿಗಳನ್ನು ನಡೆಸದೆ ನಗರದ ಜನರನ್ನು ವಂಚಿಸಲಾಗಿದೆ. ಹದಗೆಟ್ಟ ರಸ್ತೆಗಳು ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಜನರ ನೆಮ್ಮದಿಯನ್ನು ಹಾಳು ಮಾಡಿದೆ ಎಂದು ಟೀಕಿಸಿದರು. 
ನಗರದ ಮತದಾರರು ಕಾತುರದಿಂದ ಮುಂದಿನ ನಗರಸಭೆ ಚುನಾವಣೆಯನ್ನು ಎದುರು ನೋಡುತ್ತಿದ್ದು, ಜನರಪರ ಕಾಳಜಿಯ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕೆ.ಯು.ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ, ಬೊಳಿಯಂಡ ಗಣೇಶ್, ಕಾನೆಹಿತ್ಲು ಮೊಣ್ಣಪ್ಪ, ಅಂಬೆಕಲ್ಲು ನವೀನ್, ಕೋಚನ ಚೇತನ್, ಸಂಪತ್ ರಾಜ್, ಜುಲೆಕಾಬಿ, ಶ್ರೀಮತಿ ಬಂಗೇರ, ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ, ಲೀಲಾ ಶೇಷಮ್ಮ, ಉದಯ್ ಕುಮಾರ್, ಸದಾ ಮುದ್ದಪ್ಪ, ಜೆ.ಸಿ.ಜಗದೀಶ್, ಮುದ್ದಂಡ ಸುನಿಲ್ ನಂಜಪ್ಪ, ಮುನೀರ್ ಮಾಚರ್, ದಿನೇಶ್, ಚಂದ್ರಶೇಖರ್ ಆರ್.ಪಿ., ಕವ್ಸರ್, ಶಶಿಕಲಾ, ಪವಿತ್ರ, ವಸಂತ್ ಭಟ್, ಮಿನಾಜ್ ಪ್ರವೀಣ್, ಅರ್ಜುನ್ ಸೂರ್ಯ, ಜಾಫರ್, ಕಲೀಲ್ ಬಾಷಾ, ಕೆ.ಜಿ.ಪೀಟರ್, ಹಫೀಜ್, ರೇವತಿ ರಮೇಶ್, ಧನಲಕ್ಷ್ಮಿ, ಪೊನ್ನಕ್ಕ, ಪ್ರೇಮ ನಿಂಗಪ್ಪ, ಸೈನಾಜ್, ಹರಿಣಾಕ್ಷಿ, ರೀನಾ, ಸುನಂದ, ಹುಸೈನ್, ರಜಿಯಾ ಬಾನು, ಹಬೀಬ್, ಲೆಸ್ಲಿ, ಗಣೇಶ್, ಮೈಮುನ, ಸುಬ್ರಮಣಿ, ರಾಹುಲ್ ಮಾರ್ಷಲ್, ಆಶಾ, ಅನು, ಜಿ.ಆರ್.ರಾಜು, ಸೊಯೆಬ್, ಮುಪ್ಪಿತ್, ಸಾಹುಲ್, ಪ್ರತಾಪ್, ಗೋಪಿನಾಥ್, ಗೀತ, ಪ್ರೇಮ ಕೃಷ್ಣಪ್ಪ, ಜಯರಾಮ್, ಶಾಮಣ್ಣ, ನಂದಿನಿ ಗೌರಮ್ಮ, ನಜರ್ ಹುಸೇನ್, ಶೇಕ್ ಅಹಮದ್, ರಿಯಾಜ್ ದಿನ್, ನಿಶಾಂತ್, ಅಲೇಖ, ವೇಣುಗೋಪಾಲ್, ಜಯಕುಮಾರ್, ದಯಾನಂದ, ಗಿರೀಶ್ ಕುಮಾರ್, ವಿನೋದ್ ಸೇರಿದಂತೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.