Kodagu

ಕೂರ್ಗ್ ಡೈಲಿ ಆನ್‌ಲೈನ್ POLL: ಮಡಿಕೇರಿ ಬಿಜೆಪಿ ಅಭ್ಯರ್ಥಿಯಾಗಿ ಎಡಿಕೇರಿ ಪ್ರಸನ್ನಗೆ ಭಾರಿ ಒಲವು

admincoorgdaily

ಕೂರ್ಗ್ ಡೈಲಿ ಆನ್‌ಲೈನ್ POLL: ಮಡಿಕೇರಿ ಬಿಜೆಪಿ ಅಭ್ಯರ್ಥಿಯಾಗಿ ಎಡಿಕೇರಿ ಪ್ರಸನ್ನಗೆ ಭಾರಿ ಒಲವು
1002849658.jpg


ಮಡಿಕೇರಿ:ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚು ಓದುಗರನ್ನು ಕೇವಲ ಒಂದು ವರ್ಷದಲ್ಲಿ ಸಂಪಾದಿಸಿರುವ ಜಿಲ್ಲೆಯ ವಿಶ್ವಾಸಾರ್ಹ ಹಾಗೂ ಕ್ಷಣ ಕ್ಷಣದ ಸುದ್ದಿಗಳನ್ನು ವೇಗವಾಗಿ ಜನರಿಗೆ ತಲುಪಿಸುವ ಕೂರ್ಗ್ ಡೈಲಿ ಸುದ್ದಿತಾಣವು ಬುಧವಾರ 2028ರ ಮಡಿಕೇರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದೆಂಬ ಆನ್‌ಲೈನ್ POLL ನಡೆಸಿತು.

ಬುಧವಾರ ಬೆಳಗ್ಗಿನಿಂದ ಗುರುವಾರ ಸಂಜೆ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಮುಂದಿನ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇದೀಗ ಕೂರ್ಗ್ ಡೈಲಿ ನಡೆಸಿದ ಆನ್‌ಲೈನ್ ವೋಟಿಂಗ್‌ನಲ್ಲಿ ಒಟ್ಟು 2740 ಮಂದಿ ವೋಟ್ ಮಾಡಿದ್ದಾರೆ.

ಫಲಿತಾಂಶ ಹೀಗಿದೆ:

- ಎಡಿಕೇರಿ ಪ್ರಸನ್ನ - 1562 ಮತಗಳು (ಶೇ. 58)
- ಬಿಬಿ ಭಾರತೀಶ್ - 904 ಮತಗಳು (ಶೇ. 33)
- ಮಾಜಿ ಶಾಸಕ ಎಂಪಿ ಅಪ್ಪಚ್ಚು ರಂಜನ್ - 137 ಮತಗಳು (ಶೇ. 5)
- ಇತರೆ - 137 ಮತಗಳು (ಶೇ. 5)

ಶೇ. 58ರಷ್ಟು ಮಂದಿ ಎಡಿಕೇರಿ ಪ್ರಸನ್ನ ಅವರ ಪರವಾಗಿ ಒಲವು ತೋರಿದ್ದರೆ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಬಿಬಿ ಭಾರತೀಶ್ ಅವರ ಪರವಾಗಿ ಶೇ. 33ರಷ್ಟು ಮಂದಿ ಮತ ಚಲಾಯಿಸಿದ್ದಾರೆ.
2028ರ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕಾದು ನೋಡಬೇಕಿದೆ.