Kodagu

ಪ್ರವಾಸೋದ್ಯಮ ಸಚಿವ ಜಾಜ್೯ ಭೇಟಿಯಾದ ಕೂಗ್೯ ಹೋಟೇಲ್ ಅಸೋಸಿಯೇಷನ್ ನಿಯೋಗ

admincoorgdaily

ಪ್ರವಾಸೋದ್ಯಮ ಸಚಿವ ಜಾಜ್೯ ಭೇಟಿಯಾದ ಕೂಗ್೯ ಹೋಟೇಲ್ ಅಸೋಸಿಯೇಷನ್ ನಿಯೋಗ
1002595261.jpg


ಮಡಿಕೇರಿ ಅ.10 - ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ಟಿ.ಜೆ.ಜಾಜ್೯ ಅವರನ್ನು ಭೇಟಿಯಾಗಿ ಕೊಡಗಿಗೆ ಅಗತ್ಯವಿರುವ ಸೌಲಭ್ಯಗಳ ಬೇಡಿಕೆಯನ್ನು ಸಲ್ಲಿಸಲಾಯಿತು.

ನಿಯೋಗದ  ಪ್ರಮುಖರೊಂದಿಗೆ ಕೊಡಗಿನಲ್ಲಿ ಆಗಬೇಕಾಗಿರುವ ಪ್ರವಾಸೋದ್ಯಮದ ಪ್ರಗತಿ ಕಾಯ೯ಗಳ ಬಗ್ಗೆ ಚಚಿ೯ಸಿದ ಸಚಿವ ಜಾಜ್೯, ಎಲ್ಲಾ ರೀತಿಯಲ್ಲಿಯೂ ನೆರವು ನೀಡಲು ಸಿದ್ದ ಎಂದು ಭರವಸೆ ನೀಡಿದರು.

ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವವ ಸತೀಶ್ ಜಾರಕಿಹೊಳಿ ಅವರನ್ನೂ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಭೇಟಿಯಾಗಿ ಜಿಲ್ಲೆಯ ರಸ್ತೆಗಳ ಸುಧಾರಣೆ ಬಗ್ಗೆ ಮನವಿ ಸಲ್ಲಿಸಲಾಯಿತು.

ಅಂತೆಯೇ ರಾಜ್ಯ ಕನಿಷ್ಯ ವೇತನಗಳ ಸಲಹಾ ಸಮಿತಿ ಅಧ್ಯಕ್ಷ ಟಿ.ಎಂ.ಶಕೀಲ್ ಅವರನ್ನೂ ಪ್ರವಾಸೋದ್ಯಮಿಗಳು ಭೇಟಿಯಾಗಿ ಚಚಿ೯ಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾಯ೯ದಶಿ೯ ಶಾಸಕ ಎ.ಎಸ್. ಪೊನ್ನಣ್ಣ ನೇತೖತ್ವದಲ್ಲಿ  ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್  ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ, ಪ್ರಧಾನ ಕಾಯ೯ದಶಿ೯ ನಜೀರ್ ಅಹಮ್ಮದ್,ಖಜಾಂಜಿ ಸಾಗರ್ ಗಣಪತಿ, ಉಪಾಧ್ಯಕ್ಷರಾದ  ಬಿ.ಎಸ್. ಸುಂದರ್, ಡಿ.ಕೆ. , ಮಂಜುನಾಥ್ , ಜಹೀರ್ ಅಹಮ್ಮದ್ ಇದ್ದರು.