ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ 147 ನೇ ವಾಷಿ೯ಕ ಮಹಾಸಭೆ; ಪಶ್ಚಿಮಘಟ್ಟ ಸಂಂರಕ್ಷಣೆಯೊಂದಿಗೆ ಸ್ಥಳೀಯರ ಜೀವನವೂ ರಕ್ಷಣೆಯಾಗಬೇಕು; ಸಂಸದ ಯದುವೀರ್ ಒಡೆಯರ್
admincoorgdaily

ಮಡಿಕೇರಿ; ಕಸ್ತೂರಿ ರಂಗನ್ ವರದಿ ಜಾರಿಯಿಂದ ಪರಿಸರ ಸಂರಕ್ಷಣೆಯೊಂದಿಗೆ ಸ್ಥಳೀಯರ ಜೀವನವೂ ರಕ್ಷಣೆಯಾಗಬೇಕು. ಕೇಂದ್ರ ಸಕಾ೯ರ ಈ ನಿಟ್ಟಿನಲ್ಲಿ ಸೂಕ್ತ ನಿಧಾ೯ರವನ್ನು ಖಂಡಿತಾ ಕೈಗೊಳ್ಳಲಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೊಡಗು - ಮೈಸೂರು ಸಂಸದ ಯದುವೀರ್ ಕೖಷ್ಣದತ್ತ ಒಡೆಯರ್ ಭರವಸೆ ನೀಡಿದ್ದಾರೆ.
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ 147 ನೇ ವಾಷಿ೯ಕ ಮಹಾಸಭೆಯಲ್ಲಿನ ಸದಸ್ಯರನ್ನುದ್ದೇಶಿಸಿ ಆನ್ ಲೈನ್ ಮೂಲಕ ಮಾತನಾಡಿದ ಯದುವೀರ್, ಪಶ್ಚಿಮಘಟ್ಟಗಳಿಗೂ ಅಪಾಯ ಒದಗದ ರೀತಿಯಲ್ಲಿ, ಸ್ಥಳೀಯರಿಗೂ ಸಂಕಷ್ಟ ಎದುರಾಗದಂತೆೆ ಸಮತೋಲನ ಕಾಪಾಡಿಕೊಂಡು ಸೂಕ್ತ ನಿಧಾ೯ರವನ್ನು ಕೈಗೊಳ್ಳುವಂತ ಕೇಂದ್ರ ಸಕಾ೯ರದ ಗಮನ ಸೆಳೆಯಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಕಾ೯ರ ಸೂಕ್ತ ಚೌಕಟ್ಟು ರೂಪಿಸುವ ಭರವಸೆ ತನಗಿದೆ ಎಂದರು.
ಕಸ್ತೂರಿರಂಗನ್ ವರದಿ ಜಾರಿ ಸಂಬಂಧಿತ ಸ್ಥಳೀಯರ ಭಾವನೆ ಮುಖ್ಯವಾಗುತ್ತದೆ. ಹೀಗಾಗಿ ಜನತೆಯ ಅಭಿಪ್ರಾಯವನ್ನು ಪಡೆದುಕೊಂಡು ಅವರ ಸಮಸ್ಯೆಗೂ ಸೂಕ್ತ ಪರಿಹಾರ ಕಂಡುಕೊಂಡ ಬಳಿಕವೇ ವರದಿಯನ್ನು ಜಾರಿಗೊಳಿಸಬೇಕೆಂದು ಕೇಂದ್ರದ ಗಮನ ಸೆಳೆಯಲಾಗಿದೆ ಎಂದೂ ಸಂಸದರು ನುಡಿದರು.
ಸಫೇ೯ಸಿ ಕಾಯಿದೆಯಿಂದಾಗಿ ಅನೇಕ ಕಾಫಿ ತೋಟ ಮಾಲೀಕರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭೆಯ ಛಳಿಗಾಲದ ವಿಶೇಷ ಅಧಿವೇಶನದಲ್ಲಿ ಸಕಾ೯ರದ ಗಮನ ಸೆಳೆಯಲಾಗುತ್ತದೆ. ಅನೇಕ ಕಾಮಿ೯ಕರಿಗೆ , ಉದ್ಯಮಿಗಳಿಗೆ ಜೀವನ ನೀಡಿರುವ ಕಾಫಿ ತೋಟ ಮಾಲೀಕರಿಗೇ ಸಫೇ೯ಸಿ ಕಾಯಿದೆಯಿಂದಾಗಿ ಸಂಕಷ್ಟವಾಗಬಾರದು. ಕಾಫಿ ಕೖಷಿಕರ ಜೀವನವನ್ನೂ ಮಾನವೀಯ ನೆಲೆಯಲ್ಲಿ ಗಮನಿಸಬೇಕಾಗಿದೆ. ಕೇವಲ ವಾಣಿಜ್ಯ ದೖಷ್ಟಿಯಿಂದ ಬೆಳೆಗಾರರ ಸಾಲದ ಮೊತ್ತದ ಪ್ರಕರಣ ಗಮನಿಸದೇ ಕೖಷಿಕರ ಜೀವನವನ್ನೂ ಮಾನವೀಯತೆಯಿಂದ ಪರಿಗಣಿಸಬೇಕಾಗಿದೆ ಎಂದೂ ಯದುವೀರ್ ಹೇಳಿದರು.
ಗುಡ್ಡೆಹೊಸೂರು - ಸುಳ್ಯ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯದುವೀರ್ ಒಡೆಯರ್, ಮೂಲಸೌಲಭ್ಯ ಅತ್ಯಗತ್ಯವಾಗಿದ್ದರೂ ಪರಿಸರಕ್ಕೆ ಹಾನಿಯಾಗದಂತೆ ಯಾವುದೇ ಯೋಜನೆ ಜಾರಿಯಾಗುವುದು ಕೂಡ ಅತ್ಯಗತ್ಯವಾಗಿದೆ ಎಂದರು. ಪರಿಸರವಾದಿಗಳ ಬೇಡಿಕೆ, ಕಳಕಳಿಯೂ ಈ ನಿಟ್ಟಿನಲ್ಲಿ ಪರಿಗಣನೆಗೆ ಅಹ೯ ಎಂದೂ ಸಂಸದರು ನುಡಿದರು. ಕೊಡಗಿನಲ್ಲಿ ಮೂಲಸೌಲಭ್ಯ ಮತ್ತು ಪರಿಸರ ಸಂರಕ್ಷಣೆಯ ಸಮತೋಲನೆಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಾದ ಅಗತ್ಯವಿದದ್ದು, ಈ ಬಗ್ಗೆ ಕೂಗ್೯ ಹೋಟೇಲ್ ಅಸೋಸಿಯೇಷನ್ ಪ್ರಮುಖರೊಂದಿಗೂ ಚಚೆ೯ ನಡೆಸಿರುವುದಾಗಿ ಅವರು ಹೇಳಿದರು.
ಕೊಡಗಿನ ಸವಾ೯ಂಗೀಣ ಪ್ರಗತಿ ನಿಟ್ಟಿನಲ್ಲಿ ಸ್ಥಳೀಯ ಶಾಸಕರೊಂದಿಗೆ ರಾಜ್ಯ ಮತ್ತು ಕೇಂದ್ರ ಸಕಾ೯ರಗಳ ನಡುವೆ ಸಮನ್ವಯತೆ ಸಾಧಿಸಿಕೊಂಡು ಮುಂದುವರೆಯುವುದಾಗಿಯೂ ಸಂಸದರು ಹೇಳಿದರು.
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನ 147 ನೇ ವಾಷಿ೯ಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಭಾರತೀಯ ಕಾಫಿ ಮಂಡಳಿಯ ಮುಖ್ಯಕಾಯ೯ನಿವ೯ಹಣಾಧಿಕಾರಿ ಮತ್ತು ಕಾಯ೯ದಶಿ೯ ಎಂ. ಕೂಮಾ೯ರಾವ್, ಕಾಮಿ೯ಕರ ಕೊರತೆ ಹಿನ್ನಲೆಯಲ್ಲಿ ಕಾಫಿ ಮಂಡಳಿಯು ದೇಶವ್ಯಾಪಿ ಯಾಂತ್ರೀಕರಣಕ್ಕೆ ಆದ್ಯತೆ ನೀಡುವ ಯೋಜನೆ ಜಾರಿಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕವಾದ ಯಾಂತ್ರೀಕರಣ ಘಟಕವನ್ನೇ ಮಂಡಳಿಯಿಂದ ಸ್ಥಾಪಿಸುವ ಚಿಂತನೆ ಇದೆ ಎಂದರು. ಜಾಗತಿಕವಾಗಿ ಭಾರತೀಯ ಕಾಫಿ ಅತ್ಯುತ್ತಮ ಕಾಫಿ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಮುಂದುವರೆಯಲು ಕಾಫಿ ಮಂಡಳಿ ಸಾಕಷ್ಟು ಯೋಜನೆಗಳನ್ನು ಕಾಫಿಯ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಂದಿದೆ ಎಂದರು.
ಕೊಡಗಿನಲ್ಲಿ ಅನೇಕ ವಷ೯ಗಳ ಬೇಡಿಕೆಯಾದ ಕಾಫಿ ಮ್ಯೂಸಿಯಂ ಸ್ಥಾಪಿಸಲು ಕಾಫಿ ಮಂಡಳಿ ಆಸಕ್ತಿ ಹೊಂದಿದ್ದು, ಕೊಡಗಿನ ಪ್ರವಾಸೋದ್ಯಮ ಮತ್ತು ಕಾಫಿಯನ್ನು ಹೊಂದಿಸಿಕೊಂಡು ಕಾಫಿ ಮ್ಯೂಸಿಯಂ ಯೋಜನೆ ರೂಪುಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟ ಕೂಮಾ೯ರಾವ್, ಕಾಫಿ ಮಂಡಳಿಯು ಚೆಟ್ಟಳ್ಳಿಯ ಕಾಪಿ ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ 40 ತಳಿಗಳ 1.60 ಲಕ್ಷ ಸಸಿಗಳನ್ನು ಅಭಿವೖದ್ದಿ ಪಡಿಸಲು ಮುಂದಾಗಿದ್ದು ಕಾಫಿ ಮಂಡಳಿಗೆ ಇದೊಂದು ಕ್ರಾಂತಿಕಾರಿ ಪ್ರಯೋಗವಾಗಲಿದೆ ಎಂದರು.
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ 147 ವಷ೯ಗಳ ಸುದೀಘ೯ ಕಾಲ ಕಾಫಿ ಕೖಷಿಗೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಕಾಫಿ ಮಂಡಳಿ ಕಾಯ೯ದಶಿ೯ ಕೂಮಾ೯ರಾವ್, ಕನಾ೯ಟಕ ರಾಜ್ಯವೊಂದೇ 1.60 ಲಕ್ಷ ಮೆಟ್ರಿಕ್ ಟನ್ ಕಾಫಿ ಉತ್ಪಾದಿಸುವಲ್ಲಿ ಕೊಡಗಿನ ಕಾಫಿ ಕೖೖಷಿಕರ ಕೊಡುಗೆ ಅನನ್ಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂಡಿಯನ್ ಆಯಿಲ್ ಕಾಪೋ೯ರೇಷನ್ ನ ಮೈಸೂರು ವಿಭಾಗದ ಡೆಪ್ಯೂಟಿ ಜನರಲ್ ಮ್ಯಾನೇಜರ್ ಡಿ. ಮದುನೇಶ್ವರನ್ ಮಾತನಾಡಿ, ಕಾಫಿ ಮ್ಯೂಸಿಯಂ ಸ್ಥಾಪನೆಗೆ ತಮ್ಮ ಸಂಸ್ಥೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನೂತನ ಅಧ್ಯಕ್ಷ ಮಾತಂಡ ಸಿ.ಕಾಯ೯ಪ್ಪ ಮಾತನಾಡಿ, ಮಾನವ - ವನ್ಯಜೀವಿ ಸಂಘಷ೯, ಕಾಮಿ೯ಕರ ಕೊರತೆ, ಹೆಚ್ಚುತ್ತಲೇ ಇರುವ ಕಾಫಿ ತೋಟ ನಿವ೯ಹಣಾ ನೆಚ್ಚಗಳಂಥ ಗಂಭೀರ ಸಮಸ್ಯೆಗಳಿಗೆ ಎಲ್ಲಾ ಕೖಷಿಕರು ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು. 69 ವಷ೯ಗಳ ಇತಿಹಾಸ ಹೊಂದಿರುವ ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ಧಾರವಾಡದಲ್ಲಿನ ಐಐಟಿ ಸಹಯೋಗದಲ್ಲಿ ಕಾಮಿ೯ಕ ಸ್ನೇಹಿಯಾದ ನವೀಕೖತ ಯಂತ್ರೋಪಕರಣಗಳ ಪರಿಚಯಕ್ಕೆ ಮುಂದಾಗಿದೆ ಎಂದರು. ಕಾಫಿ ಮಾಲೀಕರ ಪಾಲಿಗೆ ಯಂತ್ರಗಳೇ ಭವಿಷ್ಯದ ಕೖಷಿಯಲ್ಲಿನ ಆಶಾಕಿರಣ ಎಂದೂ ಕಾಯ೯ಪ್ಪ ಪ್ರತಿಪಾದಿಸಿದರು.
ಟಾಟಾ ಕಾಫಿ ಸಂಸ್ಥೆಯ ಹಿರಿಯ ಜನರಲ್ ಮ್ಯಾನೇಜರ್ ಕೆ.ರಾಜೀವ್ ಮಾತನಾಡಿ,, ಕಾಫಿಗಿಂತ ಅಧಿಕ ವರಮಾನ ನೀಡುವ ಹೈನುಗಾರಿಕೆ, ಬೆಣ್ಣೆಹಣ್ಣು ಸೇರಿದಂತೆ ಇತರ ಪಯಾ೯ಯ ಕೖಷಿಯತ್ತಲೂ ಬೆಳೆಗಾರರು ಆಸಕ್ತಿ ತೋರಬೇಕಾದ ಅನಿವಾಯ೯ತೆಯ ದಿನಗಳು ಎದುರಾಗಿದೆ ಎಂದರು. ಪರಿಸರ ಸ್ನೇಹಿ ಕೖಷಿಗೆ ಭವಿಷ್ಯದಲ್ಲಿ ಪ್ರತೀ ಬೆಳೆಗಾರರೂ ಗಮನ ನೀಡಲೇಬೇಕಾಗಿದೆ. ಕಾಫಿಯನ್ನೇ ನೆಚ್ಚಿಕೊಂಡು ಮೊದಲಿನಂತೆ ಕೂರುವ ದಿನಗಳು ಮರೆಯಾಗುತ್ತಿದೆ ಎಂದು ಅವರ ಎಚ್ಚರಿಸಿದರು.
ಯಂತ್ರಗಳ ಬಳಕೆ ಸ್ವಾಗತಾಹ೯ವಾಗಿದ್ದರೂ ಕಾಮಿ೯ಕರ ಕಾಯ೯ಕೌಶಲ್ಯವನ್ನು ಯಂತ್ರಗಳಿಂದ ಸರಿಗಟ್ಟಲಾಗದು. ಮನುಷ್ಯನ ಕಾಯ೯ಕ್ಷಮತೆಗೆ ಯಂತ್ರಗಳು ಸರಿಸಾಟಿಯಾಗಲಾರದು ಎಂದೂ ರಾಜೀವ್ ಅಭಿಪ್ರಾಯಪಟ್ಟರು.
ಹವಾಮಾನ ಆಧಾರಿತ ವಿಮಾ ಸಂಸ್ಥೆಯಾದ ರೀಸೆಕ್ಯೂರ್ ಸಂಸ್ಥೆಯ ಮುಖ್ಯಕಾಯ೯ನಿವ೯ಹಣಾಧಿಕಾರಿ ಜೆನ್ ಮಾಡ್ಲಾ ಮಳೆ ವಿಮೆಯ ಬಗ್ಗೆ ಮಾಹಿತಿ ನೀಡಿದರು.
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ ಮಾತನಾಡಿ, ಸಫೇ೯ಸಿ ಕಾಯಿದೆಯಿಂದ ಕಾಫಿ ತೋಟ ಮಾಲೀಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದು ಕೇಂದ್ರ ಸಕಾ೯ರ ಈ ನಿಟ್ಟಿನಲ್ಲಿ ಬೆಳೆಗಾರರ ನೆರವಿಗೆ ಬರುವಂತೆ ಮನವಿ ಮಾಡಿದರು. ವನ್ಯಜೀವಿಯಿಂದ ಕಾಫಿ ಕೖಷಿಕರು, ಕಾಮಿ೯ಕರು ಸದಾ ಜೀವಭಯದಲ್ಲೇ ದಿನಕಳೆಯುವಂತೆ ಆಗಿದೆ. ವನ್ಯಜೀವಿಗಳ ಧಾಳಿಯಿಂದ ಕೖಷಿಕರನ್ನು ಪಾರುಮಾಡುವ ನಿಟ್ಟಿನಲ್ಲಿ ಸಕಾ೯ರಗಳು ಗಂಭೀರ ಗಮನ ನೀಡುವಂತೆಯೂ ಅವರು ಮನವಿ ಮಾಡಿದರು. ಕೖಷಿಕರಿಗೆ ಸಂಬಂಧಿಸಿದ ಹತ್ತಾರು ಸಮಸ್ಯೆಗಳ ಬಗ್ಗ ಸಿಪಿಎ ಮೂಲಕ ಸಕಾ೯ರದ ಗಮನವನ್ನು ಸಮಥ೯ ರೀತಿಯಲ್ಲಿ ಸೆಳೆದಿರುವುದಾಗಿಯೂ ನಂದಾ ಬೆಳ್ಯಪ್ಪ ಸಭೆಗೆ ತಿಳಿಸಿದರು.
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ನೂತನ ಅಧ್ಯಕ್ಷರಾದ ಪುಲಿಯಂಡ ಪವನ್ ಮೊಣ್ಣಪ್ಪ ವಂದಿಸಿದ ಕಾಯ೯ಕ್ರಮದಲ್ಲಿ ಸಂಘದ ನೂತನ ಕಾಯ೯ದಶಿ೯ ಮನೆಯಪಂಡ ಡಾ. ಎಂ. ಚಂಗಪ್ಪ, ಸಂಘದ ನಿದೇ೯ಶಕರು ವೇದಿಕೆಯಲ್ಲಿದ್ದರು. ಸಂಘದ ಕಾಯ೯ದಶಿ೯ ಚೊಟ್ಟೇರ ಬೆಳ್ಳಿಯಪ್ಪ, ಸಿಬ್ಬಂದಿ ಮೂವೇರ ಸರಸ್ವತಿ ಹಾಜರಿದ್ದರು.
ಸಾಧಕ ಕಾಫಿ ಕೖಷಿಕರಿಗೆ ಸನ್ಮಾನ;
ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ವತಿಯಿಂದ ಕೊಡಗಿನಲ್ಲಿ ಕಾಫಿ ಕೖಷಿಗೆ ಗಣನೀಯ ಕೊಡುಗ ನೀಡಿದ ಕಾಫಿ ಕೖಷಿಕರನ್ನು ಕಾಫಿ ಮಂಡಳಿ ಕಾಯ೯ದಶಿ೯ ಎಂ.ಕೂಮಾ೯ರಾವ್ ಸನ್ಮಾನಿಸಿ ಗೌರವಿಸಿದರು. ಸುಂಟಿಕೊಪ್ಪದ ನಡಿಕೇರಿಯಂಡ ಬೋಸ್ ಮಂದಣ್ಣ, ಚೆಯ್ಯಂಡಾಣೆಯ ನಡಿಕೇರಿಯಂಡ ಕೆ. ಚಿಣ್ಣಪ್ಪ, ಮುತ್ತಾಮು೯ಡಿಯ ಕೆಂಬತ೯ಂಡ ಎಂ. ಮಂದಣ್ಣ, ಬಾಡಗರಕೇರಿಯ ಕಾಯಪಂಡ ಮೋಹನ್ ಕಾಳಯ್ಯ, ಮೂನಾ೯ಡುವಿನ ಅರುಣ್ ಅಪ್ಪಚ್ಚು, ಅವರನ್ನು ಸನ್ಮಾನಿಸಲಾಯಿತು.