Kodagu

ಪೊರಾಡ್ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ

admincoorgdaily

ಪೊರಾಡ್ ಗ್ರಾಮದಲ್ಲಿ  ಹುಲಿ ದಾಳಿಗೆ ಹಸು ಬಲಿ
ಶ್ರೀಮಂಗಲ: ಪೊನ್ನoಪೇಟೆ ತಾಲೂಕು ಬಿರುನಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡ್ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ.

 ಬೆಳೆಗಾರ ಕಾಯಪಂಡ ಎಸ್. ಕಾವೇರಪ್ಪ ಅವರಿಗೆ ಸೇರಿದ ಹಸುವನ್ನು ಭತ್ತದ ಗದ್ದೆಯ ಸಮೀಪ  ಬಾಣೆ ಜಾಗದಲ್ಲಿ  ಮಂಗಳವಾರ ಮೇಯಲು ಕಟ್ಟಲಾಗಿತ್ತು.

ಎಂದಿನಂತೆ ಕೊಟ್ಟಿಗೆಗೆ ಸೇರಿಸಲು ತೆರಳಿದ ಸಂದರ್ಭ ಹಗ್ಗ ತುಂಡಾಗಿ ಹಸು ನಾಪತ್ತೆಯಾಗಿದ್ದು,ಹಸುವನ್ನು ಸಮೀಪದ ದೇವರ ಕಾಡಿಗೆ ಎಳೆದೋಯಿದಿರುವ  ಹೆಜ್ಜೆ ಗುರುತು  ಪತ್ತೆಯಾಗಿದೆ. ದೇವರ ಕಾಡಿನಲ್ಲಿ ಹಸುವಿನ ತಲೆಯ ಭಾಗ ಮಾತ್ರ ಇರುವ ಕಳೆಬರ ಪತ್ತೆಯಾಗಿದ್ದು, ಉಳಿದ ಭಾಗವನ್ನು ಹುಲಿ ತಿಂದು ಹಾಕಿದೆ.

  ಶ್ರೀಮಂಗಲ ವನ್ಯಜೀವಿ ವಿಭಾಗದ ವಲಯ ಅರಣ್ಯ ಅಧಿಕಾರಿ ಅರವಿಂದ್ ಮಾರ್ಗದರ್ಶದಲ್ಲಿ ಹುಲಿ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ  ತಂಡ  ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಹಸುವಿನ ಕಳೆಬರ ಇರುವ ಸುತ್ತಾ ಮುತ್ತ ಹುಲಿಯ ಹೆಜ್ಜೆ ಗುರುತು ಸೇರಿದಂತೆ ಸಮೀಪದ ನದಿಗೆ ನೀರು ಕುಡಿಯಲು ಹುಲಿ ತೆರಳಿರುವ ಹೆಜ್ಜೆ ಗುರುತು ಪತ್ತೆ ಮಾಡಿದ್ದು, ಹುಲಿಯು ದೇವರ ಕಾಡಿನಲ್ಲಿಯೇ ಉಳಿದಿರುವ ಹಿನ್ನಲೆ  ಎಚ್ಚರ ವಹಿಸಲು ಸೂಚಿಸಿದ್ದಾರೆ.

ಕಾರ್ಯಾಚರಣೆಯಲ್ಲಿ  ಪರಕಟಕೇರಿ ವಿಭಾಗದ ಉಪ ಅರಣ್ಯ ಅಧಿಕಾರಿ ಸಚಿನ್ ಚೌಗಲಾ, ಕೂಟಿಯಾಲ ಬೀಟ್ ಬಿ. ಎಫ್. ಓ.
ವಿಜಯ್ ಕುಮಾರ್,
 ತೆರಾಲು ವಿಭಾಗದ ಅರಣ್ಯ ವೀಕ್ಷಕ ರೋಷನ್ ಮತ್ತು ಎಪಿಸಿ ಕ್ಯಾಂಪ್ ವೀಕ್ಷಕರು  ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪೊನ್ನoಪೇಟೆ ಮುಖ್ಯ ಪಶು ವೈಧ್ಯಾಧಿಕಾರಿ ಡಾ. ಬಿ. ಜಿ. ಗಿರೀಶ್  ಕಳೆ ಬರ ಮರಣೋತ್ತರ ಪರೀಕ್ಷೆ ನಡೆಸಿದರು.