Kodagu

ಡ್ರಗ್ ವ್ಯಸನದ ವಿರುದ್ದ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೖತಿ ಮೂಡಿಸಿ; ಅನಿಲ್ ಹೆಚ್.ಟಿ

admincoorgdaily

ಡ್ರಗ್ ವ್ಯಸನದ ವಿರುದ್ದ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೖತಿ ಮೂಡಿಸಿ; ಅನಿಲ್ ಹೆಚ್.ಟಿ
ಮಡಿಕೇರಿ; ಹೆಚ್ಚಾಗುತ್ತಿರುವ  ಡ್ರಗ್ಸ್ ಚಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೋಟರಿಯಂಥ ಸೇವಾ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ದುಷ್ರರಿಣಾಮದ ಬಗ್ಗೆ ಜಾಗ್ರತಿ ಕಾಯ೯ಕ್ರಮಗಳನ್ನು ಹೆಚ್ಚು ಕಾಯ೯ಗತಗೊಳಿಸಬೇಕೆಂದು ರೋಟರಿ ಜಿಲ್ಲೆ 3181 ನ ನಿದೇ೯ಶಕ ಅನಿಲ್ ಹೆಚ್.ಟಿ ಕರೆ ನೀಡಿದ್ದಾರೆ.


ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕೊಡಗಿನ 10 ರೋಟರಿ ಸಂಸ್ಥೆಗಳೂ ಸೇರಿದಂತೆ ವಲಯ 6 ರ 14 ರೋಟರಿ ಸಂಸ್ಥೆಗಳ ಕಾಯ೯ಯೋಜನೆ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದ ಅನಿಲ್, ಪೊಲೀಸ್ ಇಲಾಖೆ ಈಗಾಗಲೇ ಮಾರಕವಾದ ಡ್ರಗ್ಸ್ ವಿರುದ್ದ ಸಮರ ಸಾರಿದೆ. ಆದರೆ ರೋಟರಿಯಂಥ ಸೇವಾ ಸಂಸ್ಥೆಗಳು ಕೂಡ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವ್ಯಸನದಿಂದ ದೈಹಿಕ ಮತ್ತು ಮಾನಸಿಕವಾಗಿ ಉಂಟಾಗುವ ದುಷ್ಪಾರಿಣಾಮಗಳ ಬಗ್ಗೆ ಜಾಗ್ರತಿ ಮೂಡಿಸಬೇಕು. ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡವರನ್ನು ಹೊರತರುವ ಕೆಲಸಕ್ಕೆ ರೋಟರಿ ಸಂಸ್ಥೆಗಳ ಸದಸ್ಯರು ಮುಂದಾಗುವಂತೆ ಕರೆ ನೀಡಿದರು.

ರೋಟರಿ ಜಿಲ್ಲೆ 3181 ರಿಂದ ಈ ವಷ೯ ಪ್ರಾರಂಭವಾಗಿರುವ ನಮ್ಮ ಹಬ್ಬ ನಮ್ಮ ಸೇವೆ ಎಂಬ ವಿನೂತನ ಯೋಜನೆಯನ್ನು ರೋಟರಿ ಸಂಸ್ಥೆಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಆಯಾ ಗ್ರಾಮ ವ್ಯಾಪ್ತಿಯ ಉತ್ಸವಗಳಿಗೆ ಅಗತ್ಯ ಸೇವಾ ಕಾಯ೯ದ ಮೂಲಕ ನೆರವು ನೀಡಿ ಎಂದೂ ಅನಿಲ್ ಕರೆ ನೀಡಿದರು. ವಿದೇಶಿ ಅಥವಾ ಬೇರೆ ಯಾವುದೇ ಸಂಸ್ಥೆಗಳಿಂದ ಆಥಿ೯ಕ ನೆರವು ಪಡೆಯದೇ ಪ್ರತೀಯೋವ೯ ಸದಸ್ಯರೂ ತಮ್ಮ ಸ್ವಂತ ವೆಚ್ಚದಿಂದ ಸೇವಾ ಯೋಜನೆ ಜಾರಿಗೊಳಿಸುತ್ತಿರುವ ರೋಟರಿ ಸಂಸ್ಥೆಯ ಕಾಯ೯ವೈಖರಿಯನ್ನು ಮತ್ತಷ್ಟು ಜನರಿಗೆ ತಲುಪಿಸುವ ಮೂಲಕ ಸೇವಾ ಮನೋಭಾವ ಹೊಂದಿರುವ ಮತ್ತಷ್ಟು ಜನರು ರೋಟರಿ ಸದಸ್ಯರಾಗುವಂತೆ ಪ್ರೇರೇಪಿಸುವ ಕಾಯ೯ಕ್ಕೆ ಮುಂದಾಗಿ ಎಂದೂ ಅನಿಲ್ ಹೆಚ್.ಟಿ, ಕರೆ ನೀಡಿದರು.
ರೋಟರಿ ವಲಯ 6 ರ ಸಹಾಯಕ ಗವನ೯ರ್ ಎಂ.ಡಿ ರಂಗಸ್ವಾಮಿ ಮಾತನಾಡಿ, ರೋಟರಿಯಂಥ ಸೇವಾ ಸಂಸ್ಥೆಗಳ ಸದಸ್ಯರಾಗುವುದೇ ಸಮಾಜಸೇವೆಗೆ ಲಭಿಸಿರುವ ಅತ್ಯುತ್ತಮ ಅವಕಾಶವಾಗಿದೆ. ಹೀಗಿರುವಾಗ ರೋಟರಿ ಸದಸ್ಯರು ತಮ್ಮ ಅಧಿಕಾರಾವಧಿಯಲ್ಲಿ  ಸೇವೆಗೆ ದೊರಕುವ ಅವಕಾಶಗಳನ್ನು  ಕೈಚೆ್ಲ್ಲದಿರಿ ಎಂದು ಸಲಹೆ ನೀಡಿದರು.

ರೋಟರಿ ವಲಯ 6 ರ ಸಹಾಯಕ ಗವನ೯ರ್ ಗಳಾದ ಎಚ್.ಎಸ್. ವಸಂತ್ ಕುಮಾರ್, ಸಿ.ಎನ್.  ವಿಜಯ್,  , ರಾಘವೇಂದ್ರ, ವಲಯ ಸೇನಾನಿಗಳಾದ ವಸಂತ್ ಕುಮಾರ್, ಜೆ.ಕೆ.ಸುಭಾಷಿಣಿ, ಲಲಿತಾ ರಾಘವನ್, ಮಾಜಿ ಸಹಾಯಕ ಗವನ೯ರ್ ಗಳಾದ ಲಿಖಿತ್, ಮನೋಹರ್ ಕಾಮತ್ ಹಾಜರಿದ್ದರು.  ಕುಶಾಲನಗರ ರೋಟರಿ ಸಂಸ್ಥೆಯ ಅಧ್ಯಕ್ಷ  ರುದ್ರೇಶ್ ಪಟೇಲ್ ಸ್ವಾಗತಿಸಿ, ವಂದಿಸಿದರು.

ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ, ರೋಟರಿ ವುಡ್ಸ್, ಮಿಸ್ಟಿ ಹಿಲ್ಸ್,  ಕುಶಾಲನಗರ, ಗೋಣಿಕೊಪ್ಪ, ವೀರಾಜಪೇಟೆ, ಸೋಮವಾರಪೇಟೆ, ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು ಸಿದ್ದಾಪುರ,  ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮಿಡ್ ಟೌನ್, ಪಿರಿಯಾಪಟ್ಟಣ ಐಕಾನ್, ಹುಣಸೂರು, ಕೆ.ಆರ್. ನಗರ ರೋಟರಿ ಸಂಸ್ಥೆಗಳ ಅಧ್ಯಕ್ಷರು, ಕಾಯ೯ದಶಿ೯ಗಳು, ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ಕಾಯ೯ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.