Kodagu

ಅಂಬಾರಿ ಆನೆ ಅರ್ಜುನನ ಹೆಸರಲ್ಲಿ ಕ್ರಿಕೆಟ್ ಟೂರ್ನಿ

admincoorgdaily

ಅಂಬಾರಿ ಆನೆ ಅರ್ಜುನನ ಹೆಸರಲ್ಲಿ ಕ್ರಿಕೆಟ್ ಟೂರ್ನಿ
ಮಡಿಕೇರಿ: ದಸರಾ ಅಂಬಾರಿ ಆನೆ ಅರ್ಜುನನ ಹೆಸರು ಶಾಶ್ವತವಾಗಿ ಉಳಿಸುವ ಜತೆಗೆ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸುಂಟಿಕೊಪ್ಪದ ೨೨ ಯುವಕರು ಸೇರಿ ಟೀಂ ಅರ್ಜುನ ರಚಿಸಿದ್ದಾರೆ.

ಈ ತಂಡದ ಮೊದಲ ಹೆಜ್ಜೆಯಾಗಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಅ.೧೬ ರಿಂದ ೧೮ರವರೆಗೆ ಸುಂಟಿಕೊಪ್ಪ ಸರ್ಕಾರಿ ಶಾಲಾ ಮೈದಾನದಲ್ಲಿ ಪಂದ್ಯಾಟ ನಡೆಯಲಿದೆ ಎಂದು ಅಧ್ಯಕ್ಷ ಮಹಮ್ಮದ್ ಅಲಿ ತಿಳಿಸಿದರು.

ಕ್ರೀಡೆ ಮಾತ್ರವಲ್ಲ, ಮುಂದೆ ಸಾಮಾಜಿಕ ಕಾರ್ಯಗಳಲ್ಲೂ ತಂಡ ಸಕ್ರಿಯವಾಗಿರಲಿದೆ. ಪ್ರಥಮ ಬಹುಮಾನ ೩೩,೩೩೩ ರೂ., ದ್ವಿತೀಯ ೨೨,೨೨೨ ರೂ. ಹಾಗೂ ಅರ್ಜುನ ಟ್ರೋಫಿ ನೀಡಲಾಗುವುದು. ೧೬ ತಂಡಗಳಿಗೆ ಮಾತ್ರ ಅವಕಾಶವಿದ್ದು, ನೋಂದಣಿಗೆ ಸಂಶಾದ್ (೮೧೨೩೩೦೨೭೬೦) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟೀಂ ಅರ್ಜುನ ತಂಡದ ಉಪಾಧ್ಯಕ್ಷ ಹರ್ಷತ್, ಕ್ರೀಡಾ ಕಾರ್ಯದರ್ಶಿ ಪಿ.ಎಸ್.ಸಂಶಾದ್, ಸದಸ್ಯರಾದ ಆರಿಫ್, ಇಬ್ರಾಯಿಂ ಮತ್ತು ಜಗತ್ ಇದ್ದರು.