ಆನೆಕಾಡು ಹೆದ್ದಾರಿ ಕರಾಳ ರಾತ್ರಿ: ಒಂದೇ ಅಪಘಾತದಲ್ಲಿ ಮೂರು ಜೀವಗಳು ಬಲಿ
admincoorgdaily

ಕುಶಾಲನಗರ:ಭಾನುವಾರ ರಾತ್ರಿ ಆನೆಕಾಡು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಕರುಣಾಜನಕ ಅಂತ್ಯ ಕಂಡಿದೆ.
ಪಿಕ್ ಅಪ್, ಕಾರು ಮತ್ತು ಬೈಕ್ ನಡುವಿನ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್,7ನೇ ಹೊಸಕೋಟೆಯ ರತನ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ಕುಮಾರ್ ಹಾಗೂ ಸ್ವಿಫ್ಟ್ ಕಾರಿನಲ್ಲಿದ್ದ ರತನ್, ಆದರ್ಶ್ ಅವರು ಅಪಘಾತಕ್ಕೆ ಬಲಿಯಾದ ದುರ್ದೈವಿಗಳು.
ಕಾರು ಮತ್ತು ಪಿಕ್ ಅಪ್ ನಲ್ಲಿದ್ದ ಇತರರು ಗಂಭೀರವಾಗಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.