ಡಿಡಿಪಿಐ ಕಚೇರಿ ಅಧೀಕ್ಷಕ ಎಸ್.ಕೆ.ಕಿರಣ್ ನಿಧನ
admincoorgdaily

ಕುಶಾಲನಗರ: ಮಡಿಕೇರಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ ಕಚೇರಿ)ಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕುಶಾಲನಗರದ ಜನತಾ ಕಾಲೋನಿಯ ನಿವಾಸಿ ಎಸ್.ಕೆ.ಕಿರಣ್ (45 ವರ್ಷ) ಅವರು ಮಂಗಳವಾರ ನಿಧನ ಹೊಂದಿದ್ದಾರೆ.
ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರು ನಿವೃತ್ತ ನೌಕರ ಕೃಷ್ಣಮೂರ್ತಿ ಅವರ ಮಗನಾಗಿದ್ದಾರೆ.
ಮೃತರ ಅಂತ್ಯಕ್ರಿಯೆಯು ಬುಧವಾರ ಕುಶಾಲನಗರದಲ್ಲಿ ನಡೆಯಿತು.
ಮೃತರ ನಿಧನಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.