ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜೆ ಹಾಗೂ ತುಳಸಿ ಪೂಜೆ
admincoorgdaily


ವಿರಾಜಪೇಟೆ:
ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಹಾಗೂ ತುಳಸಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಅವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಅರ್ಚಕರು ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಮೊದಲಿಗೆ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಹಾಗಣಪತಿ ,ಶ್ರೀ ಅಯ್ಯಪ್ಪ ಸ್ವಾಮಿ , ಶ್ರೀ ವನದುರ್ಗೆ ಹಾಗೂ ಶ್ರೀನಾಗ ದೇವರುಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ತದನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿ ಸೇವೆಯನ್ನು ನೆರವೇರಿಸಿದರು.
ಬಲಿಪಾಡ್ಯಮಿ ಪ್ರಯುಕ್ತ ಗೋಪೂಜೆಯನ್ನು ದೇವಸ್ಥಾನದಲ್ಲಿ ನೆರವೇರಿಸಲಾಯಿತು. ಅರ್ಚಕರು ಗೋಮಾತೆಗೆ ವಸ್ತ್ರವನ್ನು ಅಲಂಕರಿಸುವುದರ ಮೂಲಕ ಪೂಜೆಯನ್ನು ಸಲ್ಲಿಸಿದರು. ಆರತಿಯನ್ನು ಬೆಳಗಿ ಪ್ರಾರ್ಥಿಸಲಾಯಿತು. ತದನಂತರ ಗೋಮಾತೆಗೆ ನಮಿಸುವುದರ ಮೂಲಕ ಮಹಾ ಮಂಗಳಾರತಿ ಸೇವೆಯನ್ನು ಸಲ್ಲಿಸಲಾಯಿತು.
ನೆರೆದಿದ್ದ ಆಡಳಿತ ಮಂಡಳಿ ಸದಸ್ಯರುಗಳು ಗೋಮಾತೆಗೆ ನಮಿಸಿದರು. ಅರ್ಚಕರು ಗೋವಿಗೆ ನೈವೇದ್ಯದ ಆಹಾರವನ್ನು ಈ ಸಂದರ್ಭದಲ್ಲಿ ನೀಡಿದರು. ತದನಂತರ ದೇವಸ್ಥಾನದ ಒಳ ಆವರಣದಲ್ಲಿ ತುಳಸಿ ಪೂಜೆಯನ್ನು ನೆರವೇರಿಸಲಾಯಿತು. ತುಳಸಿ ಪೂಜೆ ಪ್ರಯುಕ್ತ ಅರ್ಚಕರು ತುಳಸಿ ಕಟ್ಟೆಗೆ ಅಲಂಕಾರವನ್ನು ಮಾಡಿ ಪ್ರಾರ್ಥನೆಯನ್ನು ಸಲ್ಲಿಸಿದರು. ಪಂಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು. ವಿಶೇಷ ಪೂಜೆ ಹಾಗೂ ಅಲಂಕಾರ ಪೂಜೆಯನ್ನು ಸಲ್ಲಿಸಲಾಯಿತು.
ತದನಂತದ ಅರ್ಚಕರು ತುಳಸಿ ಮಾತೆಗೆ ಮಹಾ ಮಂಗಳಾರತಿಯನ್ನು ಸಲ್ಲಿಸಿದರು. ನಾಡಿನ ಹಾಗೂ ಗ್ರಾಮದ ಆರೋಗ್ಯ ಸುಭಿಕ್ಷ ಗಾಗಿ ಈ ಸಂದರ್ಭದಲ್ಲಿ ಪ್ರಾರ್ಥನೆಯನ್ನು ಮಾಡಲಾಯಿತು.
ಪೂಜಾ ಕಾರ್ಯಕ್ರಮಗಳ ಬಳಿಕ ಪ್ರಸಾದ ವಿತರಣೆಯು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಮೂರು ದಿವಸಗಳಿಂದ ದೇವಸ್ಥಾನದಲ್ಲಿ ಸಂಜೆ ದೀಪಗಳನ್ನು ಹಚ್ಚುವುದರ ಮೂಲಕ ದೇವಸ್ಥಾನವನ್ನು ಅಲಂಕರಿಸಿ ವಿಶೇಷ ಪ್ರಾರ್ಥನೆಯನ್ನು ದೇವಸ್ಥಾನದ ಆಡಳಿತ ಮಂಡಳಿಯವರು ಸಲ್ಲಿಸಿದರು.