Kodagu

ವಿರಾಜಪೇಟೆ ಶಿವಕೇರಿ ಶ್ರೀ ದುರ್ಗಾ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮ: ಮೂರು ದಿನ ಅನ್ನಸಂತರ್ಪಣೆ

admincoorgdaily

ವಿರಾಜಪೇಟೆ ಶಿವಕೇರಿ ಶ್ರೀ ದುರ್ಗಾ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ದೀಪೋತ್ಸವ ಸಂಭ್ರಮ: ಮೂರು ದಿನ ಅನ್ನಸಂತರ್ಪಣೆ
ವಿರಾಜಪೇಟೆ:ಶಿವಕೇರಿಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ವರ್ಷಂಪ್ರತಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬದ ಪ್ರಯುಕ್ತ ಈ ಬಾರಿಯೂ ವಿಶೇಷ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

    ನವೆಂಬರ್ 8, 9 ಮತ್ತು 10 ರಂದು ಒಟ್ಟು ಮೂರು ದಿನಗಳ ಕಾಲ ಈ ದೀಪೋತ್ಸವ ಸಂಭ್ರಮ ಜರುಗಲಿದ್ದು, ಪ್ರತಿದಿನ ಸಂಜೆ 6 ಗಂಟೆಯಿಂದ ಧಾರ್ಮಿಕ ಪೂಜಾವಿಧಿಗಳು ಹಾಗೂ ದೀಪ ಬೆಳಗುವ ಕಾರ್ಯಕ್ರಮ ಆರಂಭಗೊಳ್ಳಲಿದೆ.  
  ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುವ ಸಮಸ್ತ ಭಕ್ತಾದಿಗಳಿಗಾಗಿ ಮೂರೂ ದಿನಗಳ ಕಾಲ ವಿಶೇಷ ಅನ್ನಸಂತರ್ಪಣೆ (ಮಹಾಪ್ರಸಾದ) ವ್ಯವಸ್ಥೆಯನ್ನು ಆಡಳಿತ ಮಂಡಳಿಯು ಏರ್ಪಡಿಸಿದೆ.   

   ಸಾರ್ವಜನಿಕರು ಹಾಗೂ ಶ್ರದ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಇಷ್ಟಾನುಸಾರ ಹಚ್ಚಿ ದೀಪೋತ್ಸವದಲ್ಲಿ ಭಾಗವಹಿಸಿ, ಶ್ರೀ ದೇವರ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸುವ ಮೂಲಕ ಶ್ರೀ ದುರ್ಗಾ ವಿಷ್ಣುಮೂರ್ತಿ ಹಾಗೂ ನಾಗದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.