Kodagu

ಬಾಕಿ ಬಿಲ್ ಬಿಡುಗಡೆಗೆ ಆಗ್ರಹ; ಸೆ.22ರಿಂದ PWD ಗುತ್ತಿಗೆದಾರರ ಅಹೋರಾತ್ರಿ ಧರಣಿ

admincoorgdaily

ಬಾಕಿ ಬಿಲ್ ಬಿಡುಗಡೆಗೆ ಆಗ್ರಹ; ಸೆ.22ರಿಂದ PWD ಗುತ್ತಿಗೆದಾರರ ಅಹೋರಾತ್ರಿ ಧರಣಿ
ಮಡಿಕೇರಿ: ಏಳು ವರ್ಷಗಳಿಂದ ಬಾಕಿ ಉಳಿದ ಕೋಟ್ಯಂತರ ರೂಪಾಯಿ ಬಿಲ್ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಡಿಕೇರಿ ತಾಲ್ಲೂಕು ಪಿಡಬ್ಲ್ಯೂಡಿ ಗುತ್ತಿಗೆದಾರರ ಸಂಘ ಸೆ.೨೨ರಿಂದ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.

೨೦೧೯-೨೦ರಿಂದ ಎನ್‌ಡಿಆರ್‌ಎಫ್‌ನ ೭.೫೦ ಕೋಟಿ ರೂ., ಪಿಡಬ್ಲ್ಯೂಡಿಯ ೧.೫೦ ಕೋಟಿ ರೂ. ಬಿಲ್ ಬಾಕಿ ಇದೆ. ಬಿಲ್ ಸಲ್ಲಿಸಿದರೂ, ಜಿಪಿಎಸ್ ಫೋಟೊ ನೀಡಿದರೂ ಅಧಿಕಾರಿಗಳು ಪಾಸ್ ಮಾಡುತ್ತಿಲ್ಲ ಎಂದು ಅಧ್ಯಕ್ಷ ಬಿ.ಪಿ.ರಾಜೀವ್ ಲೋಚನ್ ಆರೋಪಿಸಿದರು.
ಜಿ.ಪಂ.ನಲ್ಲಿ ಸಿಬ್ಬಂದಿ ಕೊರತೆ, ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ ತುಂಡು ಗುತ್ತಿಗೆ ನೀಡುತ್ತಿರುವುದು, ಹೊರಗುತ್ತಿಗೆ ನೌಕರನ ಅವ್ಯವಹಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸದಾಶಿವ ರೈ, ಕಾರ್ಯದರ್ಶಿ ಕವನ್, ಪ್ರಮುಖರಾದ ಜಗದೀಶ್ ರೈ, ರವಿಚಂಗಪ್ಪ, ಮೋಹನ್ ಇದ್ದರು.