Kodagu

ಶಾಲಾ ಜಾಗ ರಕ್ಷಣೆಗೆ ಆಗ್ರಹ: ಕರಿಕೆ ಪಂಚಾಯಿತಿ ವಾರ್ಡ್ ವಿಂಗಡಣೆ ತಿದ್ದುಪಡಿಗೆ ಒತ್ತಾಯ

admincoorgdaily

ಶಾಲಾ ಜಾಗ ರಕ್ಷಣೆಗೆ ಆಗ್ರಹ: ಕರಿಕೆ ಪಂಚಾಯಿತಿ ವಾರ್ಡ್ ವಿಂಗಡಣೆ ತಿದ್ದುಪಡಿಗೆ ಒತ್ತಾಯ
ಮಡಿಕೇರಿ: ಕೇರಳ ಗಡಿಭಾಗದ ಎಳ್ಳುಕೊಚ್ಚಿಯಲ್ಲಿ ಸರ್ಕಾರಿ ಶಾಲೆಗೆ ಮೀಸಲಿಟ್ಟಿದ್ದ ೮.೪೦ ಎಕರೆ ಜಮೀನಿನ ಪೈಕಿ ೭ ಎಕರೆಗೂ ಹೆಚ್ಚು ಒತ್ತುವರಿಯಾಗಿದ್ದು, ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕರಿಕೆ ಗ್ರಾಮಸ್ಥರಾದ ಕೆಕೆ.ಪೊನ್ನಪ್ಪ ಆಗ್ರಹಿಸಿದ್ದಾರೆ.

ಹಲವು ವರ್ಷಗಳ ಹಿಂದೆ ಶಾಲೆಗಾಗಿ ಜಾಗ ಮೀಸಲಿಟ್ಟು ಶಾಲೆಯನ್ನೂ ನಿರ್ಮಿಸಲಾಗಿತ್ತು. ಆದರೆ ಇಂದು ೧ ಎಕರೆ ಮಾತ್ರ ಉಳಿದಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಮನವಿ ಮಾಡಲಾಗಿದೆ. ಆದರೂ ಕ್ರಮ ವಹಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ರಕ್ಷಿಸುವಂತಾಗಬೇಕು ಎಂದು ಆಗ್ರಹಿಸಿದರು.

ಕರಿಕೆ ಗ್ರಾಮ ಪಂಚಾಯಿತಿ ವಾರ್ಡ್ ವಿಂಗಡಣೆಯಲ್ಲಿ ನ್ಯೂನತೆಯಾಗಿದ್ದು, ಸರಿಪಡಿಸಬೇಕು. ಹಿಂದೆ ಈಗಿನ ೮ನೇ ವಾರ್ಡ್‌ಗೆ ೩ ಸ್ಥಾನಗಳಿದ್ದವು. ಇದೀಗ ವಿಂಗಡಣೆಯಲ್ಲಿ ೪ ಸ್ಥಾನ ನೀಡಲಾಗಿದ್ದು, ಇದರಿಂದ ಮತ್ತೊಂದು ವಾರ್ಡ್‌ಗೆ ಅನುದಾನ, ಅಭಿವೃದ್ಧಿಯಲ್ಲಿ ಹಿನ್ನಡೆಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರಿಕೆ ಗ್ರಾಮಸ್ಥರಾದ ರಾಜೇಶ್, ಅಬ್ದುಲ್ಲ ಇದ್ದರು.