SIR ವಿರುದ್ಧ ಮಡಿಕೇರಿಯಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಪ್ರತಿಭಟನೆ
admincoorgdaily

ಮಡಿಕೇರಿ: ಮಡಿಕೇರಿಯಲ್ಲಿ ಗುರುವಾರ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ ಮತದಾನದ ಹಕ್ಕು ರಕ್ಷಣೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಖಾಸಗಿ ಬಸ್ ನಿಲ್ದಾಣದಲ್ಲಿ ವಕೀಲ ಜುನೈದ್ ಸಂವಿಧಾನ ಪೀಠಿಕೆ ಓದಿ ಚಾಲನೆ ನೀಡಿದರು. ಅಜ್ಜಮಾಡ ದೇವಯ್ಯ ವೃತ್ತದಿಂದ ತಿಮ್ಮಯ್ಯ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಸಾಗಿತು.
ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ನೋಟಿಸ್ ಇಲ್ಲದೆ ೧೩ ಕೋಟಿ ಮತದಾರರ ಹೆಸರು ತೆಗೆಯಲಾಗಿದೆ. ಪಶ್ಚಿಮ ಬಂಗಾಳದಲ್ಲಿ ೨೭ ಲಕ್ಷ ಜನರನ್ನು ಎಸ್ಐಆರ್ ನಿಂದ ಕೈಬಿಡಲಾಗಿದೆ. ಇದು ಸಂವಿಧಾನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಸಂಚಾಲಕ ನಿರ್ವಾಣಪ್ಪ, ಅಮಿನ್ ಮೊಹಿಸಿನ್ ಮಾತನಾಡಿ, ಇಂದು ನೈಜ್ಯ ಮತದಾರರ ಹಕ್ಕನ್ನು ಎಸ್ಐಆರ್ ಕಸಿದುಕೊಳ್ಳುತ್ತಿದೆ. ಬಿಜೆಪಿಯನ್ನು ಶಾಶ್ವತವಾಗಿ ಅಧಿಕಾರಕ್ಕೆ ಉಳಿಸುವ ಸಲುವಾಗಿ ಚುನಾವಣಾ ಆಯೋಜ ಇಂದು ಕೆಲಸ ಮಾಡುತ್ತಿದೆ. ಇತ್ತ ಪೊಲೀಸರು ಪ್ರತಿಭಟನಾ ನಿರತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಮತದಾರರ ಹಕ್ಕನ್ನು ಉಳಿವಿಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಸ್ಐಆರ್ ರದ್ದು, ಫಾರಂ-೭ ವಿಳಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾ ನಿರತರು, ಚುನಾವಣಾ ಆಯೋಗ ಬಿಜೆಪಿ ಪರ ವರ್ತಿಸುತ್ತಿದೆ. ಪ್ರಧಾನಿ, ಗೃಹ ಸಚಿವರು ಮತ್ತು ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕರ್, ಮನ್ಸೂರ್ ಆಲಿ, ಪ್ರಮುಖರಾದ ಜಾನ್ಸನ್ ಪಿಂಟೋ, ಮೊಣ್ಣಪ್ಪ, ಖಲೀಲ್ ಭಾಷಾ, ವೇದಿಕೆಯ ಗೌರವಾಧ್ಯಕ್ಷ ಮೊಹಮ್ಮದ್ ಹನೀಫ್, ವೇದಿಕೆ ಸಮಿತಿ ಸದಸ್ಯರಾದ ಪ್ರೇಮ್ ಕುಮಾರ್, ಹಮೀದ್ ಮೌಲಾವಿ ಇತರರಿದ್ದರು.