Kodagu

ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್; ಗೋಣಿಕೊಪ್ಪಲು ಠಾಣೆಯಲ್ಲಿ ದೂರು

admincoorgdaily

ಶಾಸಕ ಎಎಸ್ ಪೊನ್ನಣ್ಣ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್; ಗೋಣಿಕೊಪ್ಪಲು ಠಾಣೆಯಲ್ಲಿ ದೂರು
ಗೋಣಿಕೊಪ್ಪಲು: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಲಾಗಿದೆ ಎಂಬ ಆರೋಪದ ಮೇಲೆ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಂಕಿತ್ ಪೊನ್ನಪ್ಪ ಅವರು ಈ ದೂರನ್ನು ನೀಡಿದ್ದಾರೆ.

ದೂರಿನ ಪ್ರಕಾರ, ದಿನಾಂಕ 06/11/2026 ರಂದು ಗೋಣಿಕೊಪ್ಪಲು ನಗರದಲ್ಲಿ ಎಸ್‌ಐಆರ್ ಬಗ್ಗೆ ಪ್ರತಿಭಟನೆ ನಡೆಸಿದ ಸಮಯದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರು ಮಾತನಾಡುತ್ತಿರುವ ವಿಡಿಯೋವನ್ನು ಶಾಜಿ ಅಚ್ಯುತನ್ ಎಂಬುವವರು ತಮ್ಮ "Shaji Achuthan" ಎಂಬ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಆ ಪೋಸ್ಟ್‌ಗೆ 'GK GK GK' ಎಂಬ ಫೇಸ್‌ಬುಕ್ ಖಾತೆದಾರನು ಶಾಸಕರ ಗೌರವಕ್ಕೆ ಧಕ್ಕೆ ತರುವಂತೆ ಅವಹೇಳನಕಾರಿ ಮತ್ತು ಅಸಭ್ಯ ಪದಗಳಿಂದ ಕಾಮೆಂಟ್ ಮಾಡಿದ್ದಾನೆ. ಹಾಗೂ ಆ ಕಾಮೆಂಟ್ ಅನ್ನು 'Praveen' ಎಂಬುವವರು ಲೈಕ್ ಮಾಡುವ ಮೂಲಕ ಬೆಂಬಲಿಸಿದ್ದು, ಸದರಿ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ದೂರು ನೀಡಲಾಗಿದೆ.

ದೂರು ನೀಡುವ ಸಂದರ್ಭದಲ್ಲಿ ಅಂಕಿತ್ ಪೊನ್ನಪ್ಪ, ಕುಪ್ಪನಮಾಡ ಪ್ರೀತಮ್ ದೇವಯ್ಯ, ಅಣ್ಣಳಮಾಡ ರಾಬಿನ್ ತಿಮ್ಮಯ್ಯ, ನೆಲ್ಲಿರ ಶರಣು, ನೆಲ್ಲಿರ ನಿತಿನ್, ಆಂಟೋನಿ ಉಪಸ್ಥಿತರಿದ್ದರು.