ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ವತಿಯಿಂದ ನಗರದ ನವರಾತ್ರಿ ಅಂಗವಾಗಿ ಶಾರದೆ, ಲಕ್ಷ್ಮಿ ಪೂಜಾ ಮಹೋತ್ಸವ
admincoorgdaily

ವಿರಾಜಪೇಟೆ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ವತಿಯಿಂದ ನಗರದ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಕಚೇರಿ ಪೂಜೆ ಹಾಗೂ ಶಾರದೆ, ಲಕ್ಷ್ಮಿ ಪೂಜಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಹಾಗೂ ಬಣ್ಣ ಬಣ್ಣದ ರಂಗೋಲಿಯಿಂದ ಕಚೇರಿಯನ್ನು ಅಲಂಕಾರಿಗೊಳಿಸಲಾಗಿತ್ತು, ಶ್ರೀ ಲಕ್ಷಿ÷್ಮ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ದೇವಿಗೆ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಲಾಯಿತು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ಜಿಲ್ಲಾ ಯೋಜನಾ ನಿರ್ದೇಶಕರಾದ ವಿಠಲ್ ಸಾಲ್ಯಾನ್ ಅವರು ಮಾತನಾಡಿ ನವರಾತ್ರಿ ವೇಳೆ ಶಕ್ತಿ ದೇವತೆಗಳ ಆರಾಧನೆ ಮಾಡಿ ಒಂಬತ್ತು ದಿನಗಳ ಕಾಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದರ ಅಂಗವಾಗಿ ಕಛೇರಿಯಲ್ಲಿ ದೇವಿಯ ಆರಾದನೆ ನಡೆಸಲಾಯಿತು. ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಕರುನಾಡು ಸಂಪಧ್ಭರಿತವಾಗಿರಲಿ ಎಂದು ಆಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯ ತಾಲೂಕು ಯೋಜನಾ ಅಧಿಕಾರಿ ಹರೀಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಕೃಷಿ ಅಧಿಕಾರಿ ವಸಂತ್, ಮೇಲ್ವಿಚರಕರುಗಳಾದ ಶಿವಕುಮಾರ್, ತೀರ್ಥ ಕುಮಾರ್, ಧನೇಶ್ ಸೇರಿದಂತೆ ವಿವಿಧ ವಲಯ ಮೇಲ್ವಿಚಾರಕರುಗಳು, ಸದಸ್ಯರು, ಕಛೇರಿ ಸಿಬ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು.