ಮಡಿಕೇರಿ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಬಿ.ಎಸ್ಸಿ ನರ್ಸಿಂಗ್ ಬಾಕಿ ಸೀಟುಗಳಿಗೆ ನೇರ ಪ್ರವೇಶ (Walk-in Admission)
admincoorgdaily

ಮಡಿಕೇರಿ, ಅ.29: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿಯಲ್ಲಿ ಬಿ.ಎಸ್ಸಿ. ನರ್ಸಿಂಗ್ (B.Sc. Nursing) ಪದವಿ ಕೋರ್ಸ್ಗೆ ಬಾಕಿ ಉಳಿದಿರುವ 52 ಸೀಟುಗಳನ್ನು ನೇರ ಪ್ರವೇಶಾತಿ (Walk-in Admission) ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರದಿಂದ ಆದೇಶವಾಗಿರುತ್ತದೆ.
ಆದ್ದರಿಂದ ಬಿ.ಎಸ್ಸಿ ನರ್ಸಿಂಗ್ ಗೆ ಸೇರಲು ಬಯಸುವ ಅರ್ಹ ಅಭ್ಯರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) ನಿಯಮಾನುಸಾರ ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ದಿನಾಂಕ 30-10-2026 (ಶುಕ್ರವಾರ) ರಂದು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯೊಳಗೆ ಸರ್ಕಾರಿ ಶುಶ್ರೂಷಾ ಕಾಲೇಜು, ಮಡಿಕೇರಿ ಇಲ್ಲಿ ಹಾಜರಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ನೋಂದಣಿಯಾದ ಅಭ್ಯರ್ಥಿಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಂಜುಳಾ ಎ.ಕೆ, ಪ್ರಾಂಶುಪಾಲರು, ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿ - 8088835156
ಗುರುಪಾದ ಕೆ.ಪಿ, ಸಮನ್ವಯ ಅಧಿಕಾರಿಗಳು, ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿ - 9964244304