ಸೆ.10 ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ನೇರ ಸಂದರ್ಶನ
admincoorgdaily

ಮಡಿಕೇರಿ:-ಕೊಡಗು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್, 10 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಲ್ಯಾಣಿ ಮೋಟಾರ್ಸ್ ಅರೆನಾ ಶೋರೂಮ್, ಬಸಪ್ಪ ಥಿಯೇಟರ್ ಬಿಲ್ಡಿಂಗ್, ದಾಸವಾಳ ರಸ್ತೆ, ವಿವಸ್ ಆಸ್ಪತ್ರೆ ಎದುರು, ಮಡಿಕೇರಿ, ಇಲ್ಲಿ “ನೇರ ಸಂದರ್ಶನ ನಡೆಯಲಿದೆ.
ಈ ನೇರ ಸಂದರ್ಶನದಲ್ಲಿ ಕಲ್ಯಾಣಿ ಮೋಟಾರ್ಸ್ ಮಾರುತಿ ಸುಜುಕಿ ಅರೆನಾ ಹಾಗೂ ನೆಕ್ಸಾ-ಮಡಿಕೇರಿ, ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಈ ನೇರ ಸಂದರ್ಶನದಲ್ಲಿ ರಿಲೇಷನ್‍ಶಿಪ್ ಮ್ಯಾನೆಜರ್, ಆಫೀಸ್ ಬಾಯ್, ಕಾರ್ ಕೇರ್ ಎಕ್ಸಿಕ್ಯೂಟಿವ್, ಟೆಕ್‍ನಿಷಿಯನ್ಸ್, ಹಾಗೂ ಸರ್ವಿಸ್ ಅಡ್ವೈಸರ್‍ಗಳು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಪಿಯುಸಿ, ಪದವಿ, ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಪುರುಷ ಅಭ್ಯರ್ಥಿಗಳಿಗೆ ಡಿಎಲ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ವಯೋಮಿತಿ: 20 ರಿಂದ 35 ವರ್ಷಗಳು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಉದ್ಯೋಗಾಧಿಕಾರಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಾಬ್ ಕೋಆರ್ಡಿನೇಟರ್ 8296020826 ಇವರನ್ನು ಸಂಪರ್ಕಿಸಬಹುದು ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.