Kodagu

ಬಿ.ಎಸ್ಸಿ ನರ್ಸಿಂಗ್ ಪದವಿ ಕೋರ್ಸ್‍ಗೆ ಬಾಕಿ ಉಳಿದಿರುವ ಸೀಟುಗಳ ಭರ್ತಿಗೆ ನೇರ ಸಂದರ್ಶನ

admincoorgdaily

ಬಿ.ಎಸ್ಸಿ ನರ್ಸಿಂಗ್ ಪದವಿ ಕೋರ್ಸ್‍ಗೆ ಬಾಕಿ ಉಳಿದಿರುವ ಸೀಟುಗಳ ಭರ್ತಿಗೆ ನೇರ ಸಂದರ್ಶನ
ಮಡಿಕೇರಿ:-ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸರ್ಕಾರಿ ಶುಶ್ರೂಷ ಕಾಲೇಜು, ಮಡಿಕೇರಿಯಲ್ಲಿ ಬಿ.ಎಸ್ಸಿ. ನಸಿರ್ಂಗ್  ಪದವಿ ಕೋರ್ಸ್‍ಗೆ ಬಾಕಿ ಉಳಿದಿರುವ 16 ಸೀಟುಗಳನ್ನು ನೇರ ಪ್ರವೇಶಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರದಿಂದ ಆದೇಶವಾಗಿರುತ್ತದೆ. 

     ಆದ್ದರಿಂದ ಬಿ.ಎಸ್ಸಿ ನಸಿರ್ಂಗ್ ಗೆ ಸೇರಲು ಬಯಸುವ ಅರ್ಹ ಆಭ್ಯರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಿಯಮಾನುಸಾರ ಪ್ರವೇಶಾತಿಗೆ ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ನವೆಂಬರ್, 14 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯೊಳಗೆ ಸರ್ಕಾರಿ ಶುಶ್ರೂಷ ಕಾಲೇಜು, ಮಡಿಕೇರಿ ಇಲ್ಲಿ ಹಾಜರಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.  

      ನೋಂದಣಿಯಾದ ಆಭ್ಯರ್ಥಿಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮಂಜುಳಾ ಎ.ಕೆ., ಪ್ರಾಂಶುಪಾಲರು, ಸರ್ಕಾರಿ ಶುಶ್ರೂಷ ಕಾಲೇಜು ಮಡಿಕೇರಿ 8088835156 ಹಾಗೂ ಗುರುಪಾದ ಕೆ.ಪಿ. ಸಮನ್ವಯ ಅಧಿಕಾರಿಗಳು, ಸರ್ಕಾರಿ ಶುಶ್ರೂಷ ಕಾಲೇಜು ಮಡಿಕೇರಿ 9964244304 ಇವರನ್ನು ಸಂಪರ್ಕಿಸಬಹುದು.