ನಾಟಿ ಕೋಳಿ ಮರಿ ವಿತರಣೆ: ಅರ್ಜಿ ಆಹ್ವಾನ
admincoorgdaily

ಮಡಿಕೇರಿ:-ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಲ ನಿಯಮಿತ ಮೈಸೂರು ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2026-27ನೇ ಸಾಲಿನಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿಗೆ ಮಾತ್ರ 99(ಪರಿಶಿಷ್ಟ ಜಾತಿ ಶೇ.17, ಪರಿಶಿಷ್ಟ ಪಂಗಡ ಶೇ.7, ಹಿಂದುಳಿದ ವರ್ಗ ಶೇ.32, ಸಾಮಾನ್ಯ ಶೇ.44) ಗುರಿ ನಿಗಧಿಯಾಗಿದ್ದು ಮೀಸಲಾತಿ ಅನ್ವಯ ಆಯ್ಕೆಯಾಗುವ ಪ್ರತಿ ಫಲಾನುಭವಿಗಳಿಗೆ ಐದು ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು.
ಆಸಕ್ತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ ಆಸ್ಪತ್ರೆ 9448422269, ಪಶುವೈದ್ಯಾಧಿಕಾರಿ ಪಶು ಆಸ್ಪತ್ರೆ ಸುಂಟಿಕೊಪ್ಪ 9880967832, ಪಶು ವೈದ್ಯಾಧಿಕಾರಿ ಪಶು ಚಿಕಿತ್ಸಾಲಯ ಹೆಬ್ಬಾಲೆ 7349320828 ನ್ನು ಸಂಪರ್ಕಿಸಲು ಕೋರಿದೆ. ಅರ್ಜಿಯನ್ನು ಭರ್ತಿ ಮಾಡಿ ನವೆಂಬರ್, 23 ರೊಳಗೆ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ, ಕುಶಾಲನಗರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳು ಉಪ ನಿರ್ದೇಶಕರು ತಿಳಿಸಿದ್ದಾರೆ.