ವಿರಾಜಪೇಟೆಯಲ್ಲಿ ಜಿಲ್ಲಾ ಮಟ್ಟದ ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆ: ಸೆ.18 ರಂದು ಆಯೋಜನೆ
admincoorgdaily

ವಿರಾಜಪೇಟೆ: ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಮತ್ತು ದಕ್ಷಿಣ ಕೊಡಗು ಲೇಖಕಿಯರು ಮತ್ತು ಕಲಾವಿದರ ವೇದಿಕೆ ವಿರಾಜಪೇಟೆ ತಾಲೂಕು ಇವರ ವತಿಯಿಂದ ಕಾವೇರಿ ಗಣೇಶೊತ್ಸವ ವೇದಿಕೆಯಲ್ಲಿ ಸೆ.18 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಮಟ್ಟದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಗಳು ಸಬ್ ಜೂನಿಯರ್ ವಿಭಾಗ 6 ರಿಂದ 11 ವರ್ಷ, ಜೂನಿಯರ್ ವಿಭಾಗ 12ರಿಂದ 16 ವರ್ಷ, ಸೀನಿಯರ್ ವಿಭಾಗ 17 ರಿಂದ 22 ವರ್ಷ ಸಾರ್ವಜನಿಕ ವಿಭಾಗ 23 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.
ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ.17 ಹೆಸರು ನೊಂದಾಯಿಸಲು ಕಡೆಯ ದಿನಾಂಕವಾಗಿದ್ದು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣೆಗಾಗಿ ಮೊಬೈಲ್ ಸಂಖ್ಯೆ, ವಿಮಲ ದಶರಥ-9008613729, ರಜಿತಾ ಕಾರ್ಯಪ್ಪ,9481771851, ಎಂ.ಕೆ. ನಳಿನಾಕ್ಷಿ-9611018818, ಪ್ರೇಮಾಂಜಲಿ ಆಚಾರ್ಯ-8296554617, ಕೌಶಲ್ಯ ಸತೀಶ್ -7348909764, ಸಂಪರ್ಕಿಸಬಹುದು.