Kodagu

ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ

admincoorgdaily

ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ  ಜಿಲ್ಲಾ ಮಟ್ಟದ ದಫ್ ಸ್ಪರ್ಧೆ
ವಿರಾಜಪೇಟೆ;ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ  ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಅಕ್ಟೋಬರ್ 18 ರಂದು ಚೋಕಂಡಳ್ಳಿ ನಡೆಸಲು ಸಮಿತಿಯು ತೀರ್ಮಾನಿಸಿದೆ ಎಂದು ದಫ್ ಕಲಾ ಒಕ್ಕೂಟ ಕೊಡಗು ಇದರ ಕಾರ್ಯದರ್ಶಿ  ಸಿ.ಹೆಚ್. ರಫೀಕ್ ತಿಳಿಸಿದರು. 

ವಿರಾಜಪೇಟೆ  ಪತ್ರಕರ್ತರ ವೇದಿಕೆಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು  ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯ ದಫ್ ಕಲಾ ತಂಡಗಳಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ದಫ್ ಕಲಾ ಒಕ್ಕೂಟ ಕೊಡಗು, ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ವರ್ಷವು  ಅಕ್ಟೋಬರ್  18 ರಂದು ಚೋಕಂಡಳ್ಳಿ ಯಲ್ಲಿ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದ್ದು ಈ ಬಾರಿ ಸುಮಾರು
30 ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ 15 ತಂಡಗಳು ನೋಂದಣಿ ಮಾಡಿಕೊಂಡಿದ್ದು ಜಿಲ್ಲೆಯಾದ್ಯಂತ ಇರುವ ದಫ್ ಕಲಾ ತಂಡಗಳು ಸೆಪ್ಟೆಂಬರ್ ತಿಂಗಳ 25 ರ ಒಳಗಾಗಿ ನೋಂದಣಿ ಮಾಡಿಕೊಂಡು ಸ್ವರ್ಧೆಯ ಯಶಸ್ಸಿಗೆ ಸಹಕರಿಸ ಬೇಕೆಂದರು.

ದಫ್ ಕಲಾ ಒಕ್ಕೂಟ ಕೊಡಗು ಇದರ ಅಧ್ಯಕ್ಷ  ಮಜೀದ್ ಚೋಕಂಡಳ್ಳಿ  ಮಾತನಾಡಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಮದರಸಗಳಿಗೆ ಹಾಗೂ   ದಫ್ ಕಲಾ ತಂಡಗಳಿಗೆ ಈ ಸ್ಪರ್ಧೆಗೆ ಸ್ವಾಗತ ಬಯಸುತ್ತೇನೆ. ಒಕ್ಕೂಟದ ವತಿಯಿಂದ ಆಯೋಜಿಸುತ್ತಿರುವ ಜಿಲ್ಲಾ ಮಟ್ಟದ   ದಫ್ ಸ್ಪರ್ಧೆಯು ಬೆಳಗ್ಗೆ 8 ಗಂಟೆಯಿಂದ  ರಾತ್ರಿ 10 ಗಂಟೆಯ ವರೆಗೆ ನಡೆಯಲಿದ್ದು ಸಮಾರೋಪ ಸಮಾರಂಭದಲ್ಲಿ ಜುಬೇದ್ ತೋಟಿಕಲ್ ರವರ ಕಥಾ ಪ್ರಸಂಗ  ಜರುಗಲಿದೆ. ಕಾರ್ಯಕ್ರಮದಲ್ಲಿ ಪಂಡಿತರು , ಸಾಮಾಜಿಕ ಮತ್ತು ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದಫ್ ಕಲಾ ಒಕ್ಕೂಟದ ಉಪಾಧ್ಯಕ್ಷ  ಶಫೀಕ್ ಗುಂಡಿಕೆರೆ ಜಿಲ್ಲೆಯಲ್ಲಿನ ದಫ್ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ  ಹಾಗೂ  ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ  ನೀಡುವ ನಿಟ್ಟಿನಲ್ಲಿ  ಒಕ್ಕೂಟ ಸತತವಾಗಿ ಈ ಸ್ಫರ್ಧೆಯ ಆಯೋಜನೆ ಮಾಡುತ್ತಿದೆ. ಇಲ್ಲಿ ಉತ್ತಮ ಪ್ರದರ್ಶನ  ನೀಡಿದ ತಂಡಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 9972068760, 8123173789 ಈ ಸಂಖ್ಯೆಗೆ ಸಂಪರ್ಕಿಸಿ  ಎಂದರು .
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ದಫ್ ಒಕ್ಕೂಟದ ಸಹ ಕಾರ್ಯದರ್ಶಿ  ಮೈದು ಹಾಜಿ ಗುಂಡಿಕೆರೆ ಹಾಜರಿದ್ದರು.