Kodagu

40ಎಕರೆಯಲ್ಲಿ ಮಹ್ಲರತುಲ್ ಬದ್ರಿಯಾ ವಾರ್ಷಿಕೋತ್ಸವ ಹಾಗೂ ದಿಕ್ರ್ ದುಆ ಮಜ್ಲಿಸ್: ನ.29ರಂದು ಆಯೋಜನೆ

admincoorgdaily

40ಎಕರೆಯಲ್ಲಿ  ಮಹ್ಲರತುಲ್ ಬದ್ರಿಯಾ ವಾರ್ಷಿಕೋತ್ಸವ   ಹಾಗೂ ದಿಕ್ರ್ ದುಆ ಮಜ್ಲಿಸ್: ನ.29ರಂದು ಆಯೋಜನೆ
ಸಿದ್ದಾಪುರ:  ಮಹ್ಲರತುಲ್ ಬದ್ರಿಯಾ ವಾರ್ಷಿಕೋತ್ಸವ  ಹಾಗೂ ದಿಕ್ರ್ ದುಆ ಮಜ್ಲಿಸ್ ಕಾರ್ಯಕ್ರಮವನ್ನು ನವೆಂಬರ್ 29, ಭಾನುವಾರ ಸಂಜೆ 6.30 ಗಂಟೆಗೆ 40 ಎಕರೆಯ ಶಾದಿ ಮಹಲ್‌ನಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೆ.ಎಂ.ಜೆ., ಎಸ್.ವೈ.ಎಸ್., ಎಸ್.ಎಸ್.ಎಫ್. 40 ಎಕರೆ ಘಟಕದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಝೈನುದ್ದೀನ್ ಅಲ್ ಬುಖಾರಿ ಕೂರಿಕೂಯಿ ತಂಙಳ್ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಹ್ಸನಿ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ ಎಂದು ಸಲಾಂ ಅವರು ತಿಳಿಸಿದ್ದಾರೆ.