ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್ ಆದ ಕೊಡಗಿನ ದಿಯಾ ಭೀಮಯ್ಯ
admincoorgdaily

ಪೊನ್ನಂಪೇಟೆ, 22: ಸಿಕ್ಕಿಂನ ಪಾಲ್‌ಜೋರ್ ಕ್ರೀಡಾಂಗಣದಲ್ಲಿ ನ.14ರಿಂದ 21ರವರೆಗೆ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಅಧೀನದಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗಿನ ಬೋಪ್ಪಂಡ ದಿಯಾ ಭೀಮಯ್ಯ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
19 ವರ್ಷದೊಳಗಿನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಭಾರತದ ಪ್ರಥಮ ಶ್ರೇಯಾಂಕಿತ ಆಟಗಾರ್ತಿಯಾಗಿರುವ ದಿಯಾ ಭೀಮಯ್ಯ, ಹರಿಯಾಣದ ಬಾರುಣಿ ಪರಸ್ವಾಲ್ ಅವರೊಂದಿಗೆ ಜೋಡಿಯಾಗಿ ಅದ್ಭುತ ಪ್ರದರ್ಶನ ನೀಡಿದರು.
ರೋಚಕ ಫೈನಲ್ ಪಂದ್ಯದಲ್ಲಿ ಉತ್ತರಾಖಂಡದ ಆನ್ಯ ಬಿಷ್ಟ್ ಮತ್ತು ಏಂಜಲ್ ಪುನೇರ ಅವರ ಜೋಡಿಯನ್ನು 10-15, 15-12, 15-12 ಅಂಕಗಳ ಅಂತರದಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ ಮಟ್ಟದ ಈ ಸಾಧನೆಯ ಮೂಲಕ ದಿಯಾ ಭೀಮಯ್ಯ ಕೊಡಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.