Kodagu

ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘಕ್ಕೆ ರೂ 1 ಲಕ್ಷ ದೇಣಿಗೆ ಹಸ್ತಾಂತರ

admincoorgdaily

ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘಕ್ಕೆ ರೂ 1 ಲಕ್ಷ ದೇಣಿಗೆ ಹಸ್ತಾಂತರ
ವಿರಾಜಪೇಟೆ: ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದ (ಮಹಿಳಾ ಸಮಾಜ) ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿವಂಗತ ಬಲ್ಯಾಟಂಡ ಮುದ್ದವ್ವನವರ ಕುಟುಂಬಸ್ಥರ ವತಿಯಿಂದ ಸಂಘದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲು ಒಂದು ಲಕ್ಷ ರೂಪಾಯಿ ಮೌಲ್ಯದ ಚೆಕ್ ಅನ್ನು ಹಸ್ತಾಂತರಿಸಲಾಯಿತು.

  ಬಲ್ಯಾಟಂಡ ಕುಟುಂಬಸ್ಥರ ಪರವಾಗಿ ಬಲ್ಯಾಟಂಡ ದೇವಿ ಪ್ರಸಾದ್ ಅವರು ಮಹಿಳಾ ಸಮಾಜದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ ಅವರಿಗೆ ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ಹಸ್ತಾಂತರಿಸಿದರು.

  ಈ ಸಂದರ್ಭದಲ್ಲಿ ಮಾತನಾಡಿದ ಬಲ್ಯಾಟಂಡ ದೇವಿ ಪ್ರಸಾದ್ ಅವರು, "ಮಹಿಳಾ ಸಹಕಾರ ಸಂಘವು ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಾ ಬಂದಿದೆ. ಸಂಘಕ್ಕೆ ನಿತ್ಯವೂ ವಿವಿಧ ಕೆಲಸಗಳಿಗಾಗಿ ಆಗಮಿಸುವ ಸದಸ್ಯರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಹಾಗೂ ಸಂಸ್ಥೆಯ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಲಿ ಎಂಬ ಸದುದ್ದೇಶದಿಂದ ನಮ್ಮ ಕುಟುಂಬದ ವತಿಯಿಂದ ಈ ಕಿರು ಕಾಣಿಕೆಯನ್ನು ನೀಡುತ್ತಿದ್ದೇವೆ. ಈ ಸಂಸ್ಥೆಯು ಮತ್ತಷ್ಟು ಎತ್ತರಕ್ಕೆ ಬೆಳೆದು ಮಹಿಳೆಯರಿಗೆ ಪ್ರಮುಖ ಆಸರೆಯಾಗಲಿ"ಎಂದು ಶುಭ ಹಾರೈಸಿದರು.

  ಕಾರ್ಯಕ್ರಮದಲ್ಲಿ ಬಲ್ಯಾಟಂಡ ಕುಟುಂಬದ ಪ್ರಮುಖರಾದ ಪದ್ಮಾ ಗಣಪತಿ, ಕೌಶಿಕ್ ಕುಟ್ಟಯ್ಯ, ಅಭಿಷೇಕ್ ಬಿದ್ದಪ್ಪ ಹಾಗೂ ದೇವಯ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.

  ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಳಿಯಪ್ಪ, ಉಪಾಧ್ಯಕ್ಷೆ ಬಿ.ಆರ್. ಸಬಿತಾ, ನಿರ್ದೇಶಕರಾದ ಆಶಾ ಚಿಣ್ಣಪ್ಪ, ಯು.ಕೆ. ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್, ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್, ಬಿ.ಎನ್. ಭಾರತಿ, ಬಿ. ಯಶೋಧ, ಎಚ್.ಆರ್. ಪುಷ್ಪವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಪುಷ್ಪಲತಾ ಸೇರಿದಂತೆ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.